ರೈತರಿಗೆ ಮಾಹಿತಿ ಕಣಜ ಸಿದ್ಧಗಂಗೆಯ ಜಾತ್ರೆ

ಭಾನುವಾರ, ಮೇ 26, 2019
33 °C

ರೈತರಿಗೆ ಮಾಹಿತಿ ಕಣಜ ಸಿದ್ಧಗಂಗೆಯ ಜಾತ್ರೆ

Published:
Updated:
Prajavani

ಹಳಯ ಮೈಸೂರು ಭಾಗದಲ್ಲಿ ಸಿದ್ಧಗಂಗೆಯ ಜಾತ್ರೆ ಪ್ರಸಿದ್ಧವಾದುದು. 1902ರಲ್ಲಿ ಉದ್ಧಾನ ಶಿವಯೋಗಿಗಳು ಮಠಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಆರಂಭವಾಯಿತು. ಪ್ರತಿ ವರ್ಷ ಶಿವರಾತ್ರಿಯ ಮರುದಿನ ರಥೋತ್ಸವ ಜರುಗುತ್ತದೆ. ಜಾತ್ರೆಯ ಕಾರ್ಯಕ್ರಮಗಳಿಗೆ ಶಿವರಾತ್ರಿ ಹಬ್ಬಕ್ಕೂ ಒಂದು ವಾರದ ಮುನ್ನವೇ ಚಾಲನೆ ದೊರೆಯುತ್ತವೆ.

ಸಿದ್ಧಗಂಗೆಯ ಜಾತ್ರೆ ಬರೀ ಉತ್ಸವ, ರಥೋತ್ಸವದ ಚೌಕಟ್ಟಿನಲ್ಲಿ ನಡೆಯುವುದಿಲ್ಲ. ರೈತರಿಗೆ ಮಾಹಿತಿಯ ಕಣಜವಾಗಿದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆಯೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ದನಗಳ ಪರಿಷೆ. ರಥೋತ್ಸವಕ್ಕೆ ಸುಮಾರು 10 ದಿನಗಳಿದೆ ಎನ್ನುವಾಗಲೇ ಮಠದ ಹಿಂಬದಿಯ ಬಯಲಿನಲ್ಲಿ ದನಗಳ ಪರಿಷೆ ಕೂಡುತ್ತದೆ. ಬೇಸಾಯಕ್ಕೆ ಅಗತ್ಯವಾದ ರಾಸುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವ ರೈತರು ದೂರದ ಸ್ಥಳಗಳಿಂದ ಬರುವರು. ‘ಉತ್ತಮ ರಾಸು’ ಆಯ್ಕೆಗೆ ಸ್ಪರ್ಧೆಯೂ ಜರುಗುತ್ತದೆ. ಈ ಎಲ್ಲ ದೃಷ್ಟಿಯಲ್ಲಿ ನೋಡುವುದಾದರೆ ಸಿದ್ಧಗಂಗೆಯ ಜಾತ್ರೆ ‘ರೈತೋತ್ಸವ’ದ ರೀತಿ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !