ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಬಿಸಿಲಿಗೆ ಕೂಲ್ ಸೀರೆ

Last Updated 13 ಮಾರ್ಚ್ 2019, 14:40 IST
ಅಕ್ಷರ ಗಾತ್ರ

ನಾಮ ಒಂದೇ ಭಾವ ಹಲವು; ಅದುವೇ ಸೀರೆ.ಅದೇನೊ ಸಂಭ್ರಮ–ಸಡಗರ, ತುಸು ಕಷ್ಟ, ಒಂದಿಷ್ಟು ಕಿರಿಕಿರಿ... ಆದರೂ ಬೇಕೇ ಬೇಕು ಸೀರೆ. ಕಾಲ ಎಷ್ಟೇ ಮುಂದೋಡಿದರೂ, ಏನೆಲ್ಲಾ ಬದಲಾವಣೆಗಳು ಬಂದರೂ, ತರಹೇವಾರಿ ವಸ್ತ್ರಗಳು ಲಗ್ಗೆ ಇಟ್ಟರೂ ಸೀರೆಗೆ ಸಮನಾದ ದಿರಿಸು ಮತ್ತೊಂದಿಲ್ಲ. ಅದರಲ್ಲೂ ಸಾಂಪ್ರದಾಯಿಕ ಸಮಾರಂಭಗಳೆಂದರೆ ಸೀರೆ ತೊಡದೇ ಅದು ಪರಿಪೂರ್ಣವಾಗುವುದೇ ಇಲ್ಲ.

ಆದರೆಈ ಉರಿಯುವ ಸೆಕೆಗೆ,ರಾಚುವ ಬಿಸಿಲಿಗೆ ಭಾರವಾದ ರೇಷಿಮೆ ಸೀರೆಗಳನ್ನು ಸಂಭಾಳಿಸುವುದಂತೂ ಕಷ್ಟ. ಸೂರ್ಯನ ಉರಿಗಣ್ಣಿನಲ್ಲಿ ದೇಹಕ್ಕೂ–ಮನಸ್ಸಿಗೂ–ಸಂದರ್ಭಕ್ಕೂಒಪ್ಪುವ ಸೀರೆಯನ್ನು ಹೇಗೆ ಆಯ್ದುಕೊಳ್ಳುವುದು!

ಶ್ರೀಮಂತ ನೋಟ ನೀಡುವ ಆದರೆ ಮೈಗೆ ಹಿತವೆನಿಸುವ ಹಗುರವಾದ ಸೀರೆಗಳು ಈಗಾಗಲೇ ಮಾರುಕಟ್ಟೆಯಲ್ಲಿ ಪೈಪೋಟಿಗಿಳಿದಿವೆ.

ವೈಭವದ ನೋಟ ಹೊಂದಿರುವ ಆದರೆ ಮೈಗೆ ಭಾರವೆನಿಸದ ಸೀರೆಗಳೆಂದರೆ ನೆನಪಾಗುವುದುಕಾಟನ್‌ ಸಿಲ್ಕ್‌, ಟಸ್ಸಾರ್‌ ಸಿಲ್ಕ್,ಮೂಗಾ ಸಿಲ್ಕ್, ಮಲ್ಬರಿ ಸಿಲ್ಕ್, ಪ್ರಿಂಟೆಡ್ ಸಿಲ್ಕ್, ಮೈಸೂರು ಸಿಲ್ಕ್‌... ಇತ್ಯಾದಿ. ಇವು ಶ್ರೀಮಂತ ಲುಕ್‌ ನೀಡುವುದರ ಜೊತೆಗೆ ಮೈಗೂ ಹಿತವಾಗಿರುತ್ತವೆ. ಇತ್ತೀಚೆಗೆ ಇಳಕಲ್‌ ರೇಷ್ಮೆ ಸೀರೆಗಳಿಗೂ ಬೇಡಿಕೆ ಹೆಚ್ಚಿದೆ. ಆಕರ್ಷಕ ಬಣ್ಣಗಳಲ್ಲಿ, ವೈವಿಧ್ಯಮಯ ಚಿತ್ತಾರಗಳಲ್ಲಿ ಮಾರುಕಟ್ಟೆಗೆ ಬಂದಿಳಿದ ಇಳಕಲ್‌ ಸೀರೆಗಳಿಗೆ ಬೇಸಿಗೆಯಲ್ಲಿ ಭಾರೀ ಡಿಮ್ಯಾಂಡ್. ಮೊದಲೆಲ್ಲಾ ಈ ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುತ್ತಿದ್ದರು. ಈಗನೂಲಿಗೆ ಶುದ್ಧ ರೇಷ್ಮೆಯನ್ನೂ ಸಹ ಬಳಸುತ್ತಾರೆ. ಹೀಗಾಗಿ ಇವುಗಳನ್ನೂ ಸಹ ಬೇಸಿಗೆಯ ಸಮಾರಂಭಗಳಿಗೆ ಪರಿಗಣಿಸಬಹುದು.

ಖಾದಿ ಫ್ಯಾಬ್ರಿಕ್‌ನಲ್ಲಿಯೂ ಇದೀಗ ಸಮಾರಂಭಗಳಿಗಾಗುವಂತಹ ಸೀರೆಗಳು ಬರುತ್ತಿವೆ. ಖಾದಿ ಫ್ಯಾಬ್ರಿಕ್‌ನ ನಡುವೆ ಝರಿ ಬುಟ್ಟಾ ಹಾಗೂ ಝರಿ ಬಾರ್ಡರ್ ಇರುವ ಸೀರೆಗಳು ಈ ಕಾಲದ ಟ್ರೆಂಡ್‌.ಸಿಲ್ವರ್‌ ಮತ್ತು ಗೋಲ್ಡ್‌ ಝರಿ ಬುಟ್ಟಾ ಇರುವ, 3 ಇಂಚಿನ ಟೆಂಪಲ್‌ ಬಾರ್ಡರ್ ಹಾಗೂ ಝರಿ ಪಲ್ಲು ಇರುವ ಜಾರ್ಜೆಟ್ ಸಿಲ್ಕ್‌ ಕೂಡ ಆಗಬಹುದು. ಕ್ರೇಪ್‌ ಸಿಲ್ಕ್‌ ಸೊಬಗು ಬೇರೆಯೇ. ಅಂದಕ್ಕೂ–ಆರಾಮಕ್ಕೂ ಒಗ್ಗುವ ಕ್ರೇಪ್‌, ಅಂಚು ಮತ್ತು ಆಕರ್ಷಕ ಸೆರಗಿನೊಂದಿಗೆ ಸೆಳೆಯುತ್ತದೆ. ಸಾಧಾರಣ ಬ್ಲೌಸ್‌ ಧರಿಸಿದರೂ ಚಂದ.

(ಚಿತ್ರ: ಆವರಣ್‌–ಸಾವನ್‌ ಸಂಗ್ರಹದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT