ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು ಚುಮು ಚಳಿಯ ತಾಣಗಳು

Last Updated 23 ಜನವರಿ 2019, 19:30 IST
ಅಕ್ಷರ ಗಾತ್ರ

ಜನವರಿ – ಫೆಬ್ರುವರಿ ಚಳಿಗಾಲ ಚಾಲ್ತಿಯಲ್ಲಿರುವ ಸಮಯ. ಈ ವೇಳೆಯಲ್ಲಿ ಕೆಲವು ತಾಣಗಳಲ್ಲಿ ಮಂಜುಕವಿದ ವಾತಾವರಣ. ಆ ಚುಮು ಚುಮು ಚಳಿಯಲ್ಲಿ ದಿನವಿಡೀ ಹಿತವಾದ ವಾತಾವರಣ ಇರುವ ತಾಣಗಳಿವೆ. ಅಲ್ಲಿ ಸುತ್ತಾಡುವುದೇ ಒಂದು ವಿಶಿಷ್ಟ ಅನುಭವ. ಅಂಥ ತಾಣಗಳ ಕಿರುಪರಿಚಯ ಇಲ್ಲಿದೆ..

ಮಳೆಕಾಡಿನ ದಾಂಡೇಲಿ

ಬೆಳಗಾವಿಯ ದಾಂಡೇಲಿ ಚಳಿಗಾಲದ ಸುತ್ತಾಟಕ್ಕೆ ಹೇಳಿ ಮಾಡಿಸಿದ ತಾಣ. ಈ ಪ್ರದೇಶದಲ್ಲಿ ವನ್ಯಜೀವಿಗಳು, ದಟ್ಟವಾದ ಮಳೆಕಾಡಿನ ಪ್ರಾಕೃತಿಕ ಸೌಂದರ್ಯ, ಸಾಹಸಮಯ ಚಟುವಟಿಕೆಗಳು ಎಲ್ಲವೂ ಒಂದೆಡೆ ಸಿಗುತ್ತದೆ. ಕಾಳಿ ನದಿಯಲ್ಲಿ ರ್‌್ಯಾಫ್ಟಿಂಗ್,ಕಯಾಕಿಂಗ್, ಮೌಂಟೇನ್ ಬೈಕ್ ರೈಡಿಂಗ್‌, ಸೈಕ್ಲಿಂಗ್ ಹಾಗೂ ಚಾರಣಕ್ಕೆ ಇಲ್ಲಿ ಅವಕಾಶವಿದೆ. ಕಾವಳ ಗುಹೆ, ಕುಲ್ಗಿ ನೇಚರ್ ಕ್ಯಾಂಪ್, ದಾಂಡೇಲಿ ವನ್ಯಜೀವಿ ತಾಣ, ಸಿಂಥೇರಿ ರಾಕ್, ಶಿರೋಲಿ ಬೆಟ್ಟ ಪ್ರವಾಸದ ಪಟ್ಟಿಗೆ ಸೇರಿಸಿಕೊಳ್ಳಬೇಕಾದ ಸ್ಥಳಗಳು. ಹೆಚ್ಚಿನ ಪ್ರವಾಸದ ಮಾಹಿತಿಗಾಗಿ ಈ ಜಾಲತಾಣದ ಲಿಂಕ್ ಕ್ಲಿಕ್ಕಿಸಿ https://www.holidify.com/places/dandeli/

**

ಬೆಟ್ಟಗಳ ರಾಣಿ ಕೊಡೈಕನಾಲ್

ತಮಿಳುನಾಡಿನ ಕೊಡೈಕನಾಲ್ ಇಳಿಜಾರು ಬೆಟ್ಟಗಳು, ಸುಂದರ ಜಲಪಾತಗಳಿರುವ ಪ್ರದೇಶ. ಇದು ಸಂಸ್ಕೃತಿ, ಪ್ರಕೃತಿ ಎರಡೂ ಬೆರೆತಿರುವ ತಾಣ. ಬೆಟ್ಟಗಳ ರಾಣಿ ಎಂದೇ ಪ್ರಸಿದ್ಧವಾದ ಪ್ರವಾಸಿ ಸ್ಥಳ. ಕೊಡೈಕನಾಲ್ ಹೃದಯಭಾಗದಲ್ಲಿಯೇ ಮಾನವನಿರ್ಮಿತ ಪ್ರಸಿದ್ಧ ಕೊಡೈ ಸರೋವರ ಇದೆ.ಇದು ಬೆಟ್ಟದ ಮೇಲೆ ನಡೆದಾಟಕ್ಕೆಂದೇ ನಿರ್ಮಿಸಿರುವ ತಾಣ ಕೋಕರ್ಸ್ ವಾಕ್. ಒಂದು ಕಿಲೋಮೀಟರ್ ಉದ್ದದ ಈ ಕಾಲ್ನಡಿಗೆ ಪಥದಲ್ಲಿ ಮುಂಜಾನೆ, ಮುಸ್ಸಂಜೆ ತಿರುಗಾಡುತ್ತಿದ್ದರೆ ಭೂಮಿ ಮೇಲಿನ ಸ್ವರ್ಗವನ್ನೇ ಕಣ್ತುಂಬಿಕೊಂಡಂತಾಗುತ್ತದೆ.ಇಡೀ ಕೊಡೈಕನಾಲ್‌ ವೀಕ್ಷಿಸಲುಡಾಲ್ಫಿನ್ಸ್‌ ನೋಸ್‌ ಉತ್ತಮ ವ್ಯೂವ್ ಪಾಯಿಂಟ್.ಪಳನಿ ಬೆಟ್ಟದ ಮೇಲ್ಭಾಗದಲ್ಲಿರುವ ಕೊಡೈಕನಾಲ್ ಸೌರವೀಕ್ಷಣಾಲಯ, ಪೈನ್ ಕಾಡು, ಕುಕ್ಕಲ್ ಗುಹೆ, ಚೆಟ್ಟಿಯಾರ್ ಉದ್ಯಾನ, ಲುಥೆರನ್ ಚರ್ಚ್, ಸಿಲ್ವರ್ ಕ್ಯಾಸ್ಕೇಡ್ ಜಲಪಾತ ಸೇರಿದಂತೆ ಭೇಟಿಗೆ ಹಲವು ಸ್ಥಳಗಳಿವೆ. ಮಾಹಿತಿಗೆhttps://www.holidify.com/places/kodaikanal/

ಗುಡ್ಡಗಾಡು ಮುನ್ನಾರ್

ಕೇರಳದ ಮುನ್ನಾರ್ ಚಹಾ ತೋಟಗಳಿಗಷ್ಟೇ ಅಲ್ಲದೇ, ದಟ್ಟ ಹಸಿರು, ಗುಡ್ಡಗಾಡುಗಳಿಗೆಪ್ರಸಿದ್ಧವಾಗಿರುವ ಪ್ರವಾಸಿ ತಾಣ. ಮುನ್ನಾರ್‌ನಲ್ಲಿ ಹಲವು ನೈಸರ್ಗಿಕ ವ್ಯೂವ್ ಪಾಯಿಂಟ್‌ಗಳು,ಸಲೀಂ ಅಲಿ ಪಕ್ಷಿಧಾಮ, ವಿಶ್ವಪಾರಂಪರಿಕ ತಾಣವಾಗಿರುವ ಎರವಿಕುಲಂ (ರಾಜಮಲೈ) ರಾಷ್ಟ್ರೀಯ ಉದ್ಯಾನವನ, ನಲ್ಲತನ್ನಿ ಎಸ್ಟೇಟ್‌ನಲ್ಲಿರುವ ಕೆಡಿಎಚ್‌ಪಿ ಸಂಗ್ರಹಾಲಯ ಸೇರಿದಂತೆನೋಡಲು ಸಾಕಷ್ಟು ಆಕರ್ಷಕ ತಾಣಗಳಿವೆ. ರಾಜಮಲೈ ಉದ್ಯಾನದಲ್ಲಿಯೇ ಕೊಡೈಕೆನಾಲ್‌ನ ಅತಿ ಎತ್ತರದ ಚೊಕ್ರಮುಡಿ ಬೆಟ್ಟ ಇದೆ.

ಚಿತಿರಪುರಂನಲ್ಲಿ ಹೆರಿಟೇಜ್ ಬಂಗಲೆಗಳು, ಆಟದ ಮೈದಾನಗಳು ಕಾಣಸಿಗುತ್ತವೆ. ಪುರಾತನ ಕಳರಿಪಯಟ್ಟು ಸಾಹಸಕಲೆಯ ಕೇಂದ್ರ ಕಳರಿ ಕ್ಷೇತ್ರದಲ್ಲಿ ಕಲೆಯ ಪ್ರದರ್ಶನ, ಕಾರ್ಯಾಗಾರ ನಡೆಯುತ್ತಿರುತ್ತವೆ.ವಂಡರ್ ವ್ಯಾಲಿ ಅಮ್ಯೂಸ್‌ಮೆಂಟ್‌ ಉದ್ಯಾನವನ ಪರಿಸರ ಸ್ನೇಹಿ ತಾಣ.

(ಮಾಹಿತಿ ಸಂಗ್ರಹ: ರಾಧಿಕಾ ಎನ್. ಆರ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT