ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟೂ, ಶೀಟೂ, ಪ್ರೆಸ್‌ಮೀಟೂ: ಇಲ್ಲಿದೆ ಸಿಂಪಲ್ಲಾಗ್ ಒಂದು ಪ್ರಶ್ನೋತ್ತರ

Last Updated 26 ಅಕ್ಟೋಬರ್ 2018, 10:06 IST
ಅಕ್ಷರ ಗಾತ್ರ

ನಟಿ ಶ್ರುತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ನಡುವೆ ನಡೆಯುತ್ತಿರುವ #MeToo ಕಾವೇರಿದ ಚರ್ಚೆಗೆ ಕಾವೇರಿ ನೀರು ಹಾಯಿಸಲು ಸಿನಿರಂಗದ ಹಿರಿಯರು ಗುರುವಾರ ವಾಣಿಜ್ಯ ಮಂಡಳಿಯಲ್ಲಿ ಯತ್ನಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಾದ ನಂತರ ಟೀವಿ ಚಾನೆಲ್‌ಗಳಲ್ಲಿ ಎಂದಿನಂತೆ ಚರ್ಚೆಗಳು ಗರಿಗೆದರಿದವು. ವೀರಾವೇಶದ ಹೇಳಿಕೆಗಳನ್ನು ಹಲವರುತಾಮುಂದು, ನಾಮುಂದು ಎಂದು ನೀಡಿ ಬೀಗಿದರು.

ಒಂದೇ ಸಮ ಚರ್ಚೆ ನೋಡಿನೋಡಿ ಜ್ಞಾನವೃದ್ಧಿ ಮಾಡಿಕೊಂಡ ವೀಕ್ಷಕರು ರಾತ್ರಿ ಮಲಗುವ ಮೊದಲು #MeToo ಅಂತಿಮ ಪರೀಕ್ಷೆಗೆ ಉತ್ತರ ಕೊಟ್ಟರಂತೆ. ದೊಡ್ಡ ಮೀಸೆಯ ಮಾವ ಕೊಟ್ಟಿದ್ದ ಪ್ರಶ್ನೆ ಪತ್ರಿಕೆ ಮತ್ತು ಅದಕ್ಕೆ ವೀಕ್ಷಕರು ನಿದ್ದೆಗಣ್ಣಿನಲ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತೆ...?

1) ನಾಯಿನರಿಕ್ರಿಮಿ ಕೀಟಗಳಿಗೆ ಮಾತು ಬಂದ ದಿನ ಯಾವುದು? ಅದನ್ನು ಮೊದಲು ಕೇಳಿಸಿಕೊಂಡವರು ಯಾರು?

MeToo ಆರೋಪ ಮಾಡಿದ ನಟಿಯ ಪರವಾಗಿ ಚೇತನ್‌ನಿಂತ ದಿನ ನಾಯಿ ನರಿ ಕ್ರಿಮಿ ಕೀಟಗಳಿಗೆಲ್ಲಾ ಮಾತನಾಡಬೇಕು ಎನಿಸಿತು. ನಮ್ಮ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲ ಏಕೈಕ ವ್ಯಕ್ತಿ ಧ್ರುವ ಸರ್ಜಾ ಎಂಬುದು ಜೀವಕೋಟಿಯ ತೀರ್ಮಾನವಾಗಿತ್ತು. ಹೀಗಾಗಿ ನಾಯಿ ನರಿ ಕ್ರಿಮಿ ಕೀಟಗಳ ಮಾತು ಕೇಳಿಸಿಕೊಳ್ಳುವ ಛಾನ್ಸ್‌ ಅರ್ಜುನ್ ಸರ್ಜಾ ಅವರ ಬಿಸಿರಕ್ತದ ಸೋದರಳಿಯನಿಗೆ ಒಲಿಯಿತು.

2) ಹೊಂದಾಣಿಕೆ ಯಾರಿಗೆ ಬೇಕು?

ರೆಬೆಲ್‌ಸ್ಟಾರ್‌ ಅಂಬರೀಷ್ ಅವರ ಪ್ರಕಾರ ‘ಹೆಣ್ಣು ತಗ್ಗಿಬಗ್ಗಿ ನಡೆಯಬೇಕು. ಹೊಂದಿಕೊಂಡು ಹೋಗಬೇಕು’. ಗಂಡಸರಿಗೆ ಇದೇ ಮಾತು ಅನ್ವಯವಾಗುತ್ತದೆ ಎಂದು ಹೇಳುವುದನ್ನು ಅವರು ಮರೆತರುಎಂದು ನೀವು ಭಾವಿಸಿಕೊಳ್ಳಬೇಕು. ಹೊಂದಾಣಿಕೆ ಎಂಬುದುಗಂಡಸರಿಗೆ ದೈವದತ್ತ ವರ ಎಂದು ಅಂಬರೀಷ್ ತಮ್ಮದೇ ಉದಾಹರಣೆಯಿಂದ ಬಿಂಬಿಸಿಕೊಂಡರು ಎಂದು ನೀವು ನಂಬಬಹುದು.

3) ದೈವಭಕ್ತ ನಟ ಹೀಗೆ ಮಾಡಿರಲು ಸಾಧ್ಯವೇ?

ಆರೋಪ ಮಾಡಿದ ನಟಿ ದೈವಭಕ್ತೆಯಲ್ಲ ಎಂದು ನಂಬುವುದು ಹೇಗೆ?

4) 150 ಫಿಲಂಗಳಲ್ಲಿ ಹೆಣ್ಣನ್ನು ಕಾಪಾಡಿದ ನಟ, ಹೀಗೆ ಮಾಡಲು ಸಾಧ್ಯವೇ?

ಅದೇ ನೋಡಿ ನೀವು ತಪ್ಪು ತಿಳಿದಿರುವುದು. ಆ ಮಹಾನ್ ನಟ 150 ಫಿಲಂಗಳಲ್ಲಿ ಹೆಣ್ಣನ್ನು ಕಾಪಾಡಿದ್ದರೆ ಖಂಡಿತ ಹೀಗೆ ಮಾಡುತ್ತಿರಲಿಲ್ಲ. ಅವರು ಕೇವಲ 149 ಚಿತ್ರಗಳಲ್ಲಿ ಹೆಣ್ಣನ್ನು ಕಾಪಾಡಿದ್ದಾರೆ. ಉಳಿದೊಂದು ಚಿತ್ರದಲ್ಲಿ ಏನಿದೆಯೋ ನಮಗೆ ಗೊತ್ತಿಲ್ಲ.

5) ಏಸುಸ್ವಾಮಿ ಭಕ್ತರು ಆಂಜನೇಯನ ಭಕ್ತರ ಮೇಲೆ ಮಾಡಿರುವ ಪಿತೂರಿಯೇ?

ಏಸುಸ್ವಾಮಿಯೂ ಬ್ರಹ್ಮಚಾರಿ, ಆಂಜನೇಯನೂ ಬ್ರಹ್ಮಚಾರಿ. ಬಂದಿರುವ ಆರೋಪ ಮಾತ್ರ ಲೈಂಗಿಕ ದೌರ್ಜನ್ಯದ್ದು. ಮನುಷ್ಯರು ಮನುಷ್ಯರ ಕಿತ್ತಾಟಕ್ಕೆ ದೇವರುಗಳೇಕೆ ಭೂಮಿಗೆ ಬರಬೇಕು.

6) ಮಾಮನ ಬಗ್ಗೆ ಮಾತಾಡೋ ನಿಮ್ಮ ಹಿಂದೆ ಯಾರೆಲ್ಲಾ ಇದ್ದಾರೆ ಆಂತ ಗೊತ್ತು. ಬೇಟೆಯಾಡಿಬಿಡ್ತೀವಿಹುಷಾರ್...

ಸಿನಿಮಾ ನಟರು ತೆರೆಯ ಮೇಲೆ ಹೀಗೆ ಅಬ್ಬರಿಸಿದರೆ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಾರೆ. ನಿಜ ಜೀವನದಲ್ಲಿ ಬೇಟೆ ಅಂದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ‘ವೈಲ್ಡ್‌ಲೈಫ್ ಪ್ರೊಟೆಕ್ಷನ್ ಆಕ್ಟ್’ ಪುಸ್ತಕ ತೋರಿಸ್ತಾರೆ. ರಕ್ತ ಚೆಲ್ತೀನಿ ಅಂದ್ರೆ ಪೊಲೀಸರು ‘ಇಂಡಿಯನ್ ಪೀನಲ್ ಕೋಡ್’ ತೋರಿಸ್ತಾರೆ. ಅಭಿಮಾನಿಗಳು ಅಸಹ್ಯ ಮಾಡಿಕೊಳ್ತಾರೆ.

7) ಪುರುಷರಿಂದಲೇ ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತೆ ಅಂತ ಹೇಗೆ ಅಂದ್ಕೊಂಡ್ರಿ?

ಅಂಕಲ್ ಖಂಡಿತಾ ನಾವು ತಪ್ಪು ಮಾಡಿಬಿಟ್ಟಿದ್ವಿ. ತನುಶ್ರೀ ದತ್ತಾನನ್ನ ಮೇಲೆ ಅತ್ಯಾಚಾರ ಮಾಡಿದಳು ಎಂದರಾಖಿ ಸಾವಂತ್‌ನಮ್ಮೆಲ್ಲರ ಕಣ್ಣು ತೆರೆಸಿದಳು. ಹೌದು, ನಿಮಗೇಕೆ ನಿನ್ನೆಯ ಗೌಜುಗದ್ದಲದ ಪ್ರೆಸ್‌ಮೀಟ್‌ನಲ್ಲಿ ರಾಖಿ ಸಾವಂತ್ ನೆನಪಾದ್ಳು?

8) ನೀವು ಕ್ರಾಂತಿಕಾರಿಗಳು. ಅದಕ್ಕೇನಿಮ್ಮ ಸಂಘಟನೆಗೆ ಫೈರ್ ಅಂತಹೆಸರು ಇಟ್ಕೊಂಡಿದ್ದೀರಿ

ಬೆಳಿಗ್ಗೆ ವಿಪರೀತ ಚಳಿ ಇತ್ತಾ? ಕಾಫಿ ಮಾಡುವಾಗ ಗ್ಯಾಸ್ ಖಾಲಿ ಆಯ್ತಾ? ಅದೇ ಯೋಚನೆಯಲ್ಲಿ ಫೈರ್ ಅಂತ ಹೆಸರು ಕೊಟ್ಟುಬಿಟ್ವಿ. ಈಗೇನೂ #MeTooಗೆ ಫೈರ್, #SheTooಗೆ ವಾಟರ್, #MenTooಗೆ ಸ್ಟಾರ್... ಹೀಗೆ ಇಂಗ್ಲಿಷಿನಲ್ಲಿ ಇರೋಬರೋ ಹೆಸರುಗಳನ್ನೆಲ್ಲಾ ಇಟ್ಟು ಸಂಘಟನೆ ಮಾಡೋಣ ಬನ್ನಿ.

9) ನೀವೆಲ್ಲಾ ವಿದೇಶಿ ಚೇಲಾಗಳು. ಅದಕ್ಕೆ ಅಮೆರಿಕದಿಂದ MeToo ತಂದ್ರಿ

ಅಯ್ಯೋ ಅಂಕಲ್, ಮೀಟೂ ಅನ್ನೋದು ಶುದ್ಧ ಕನ್ನಡ ಪದ. ಹಳ್ಳೀಲಿ ಬೇಸಾಯದ ಕೆಲಸ ಮಾಡೋರಿಗೆ ಕೇಳಿನೋಡಿ ಬೇಕಿದ್ರೆ. ನೀವು ಬೆಂಗಳೂರಿನಲ್ಲಿ ಇದ್ದೂಇದ್ದು ಕನ್ನಡ ಮರೆತು ಹೋಗಿದ್ದೀರಿ ಅಷ್ಟೇ. ಸಂಗೀತದಲ್ಲಿ ವೀಣೆ ನುಡಿಸೋರಿಕೆ ಕೇಳಿನೋಡಿ. ಅವರೂ ಮೀಟು ಅಂತಾರೆ. ಸಾಹಿತಿಗಳನ್ನ ಕೇಳಿನೋಡಿ. ಅವರು ಭಾವನೆಗಳನ್ನು ಮೀಟುವುದು ಅಂತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT