•ಕೋಟೆ ನಾಡಲ್ಲೀಗ ನಿಧಿಗಳ್ಳರ ಶೋಧನೆ

7

•ಕೋಟೆ ನಾಡಲ್ಲೀಗ ನಿಧಿಗಳ್ಳರ ಶೋಧನೆ

Published:
Updated:
•ಕೋಟೆ ನಾಡಲ್ಲೀಗ ನಿಧಿಗಳ್ಳರ ಶೋಧನೆ

•ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧಿಯ ಗಜೇಂದ್ರಗಡದ ಕೋಟೆ- ಕೊತ್ತಲಗಳಲ್ಲೆಗ ನಿಧಿಗಳ್ಳರ ಅಟ್ಟಹಾಸ ಜೋರಾಗಿ ಸಾಗಿದೆ. ಇದರ ಮುಂದು ವರೆದ ಭಾಗವಾಗಿಯೇ ದೇವಾಲಯ, ಸ್ಮಾರಕ ಹಾಗೂ ರಾಜವಾಡೆಗಳ ಅವಿಸ್ಮರಣೀಯ ಕಟ್ಟಡಗಳು ಭಗ್ನಗೊಂಡು ವಿಕಾರರೂಪ ತಾಳುತ್ತಿವೆ.ಇದಕ್ಕೆ ಪುಷ್ಟಿ ಎನ್ನುವಂತೆ ಗಜೇಂದ್ರ ಗಡದ ಅಶೋಕ ಅಣ್ಣಸಾಹೇಬ ಘೋರ್ಪಡೆ ಅವರ ಒಡೆತನದ ಪಾಳು ಬಿದ್ದ ರಾಜವಾಡೆಯಲ್ಲಿ ನಿಧಿ ಆಸೆಗಾಗಿ ಆಳವಾದ ಗುಂಡಿಯನ್ನು ಅಗೆಯ ಲಾಗಿದೆ.  ಜೊತೆಗೆ ಕಳೆದ ವರ್ಷ ಇಲ್ಲಿನ ಪ್ರತಾಪಸಿಂಹ ಭುಜಂಗರಾವ್ ಘೋರ್ಪಡೆ ಎಂಬುವವರ ಒಡೆತನದ ರಾಜವಾಡೆಯಲ್ಲಿನ ಪಂಚಲೋಹದ ನಟರಾಜ ಮತ್ತು ಕಾಲಕಾಲೇಶ್ವರನ ಮೂರ್ತಿಯನ್ನು ಕದ್ದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿರುವ ವೇಳೆ ಪೂಲೀಸರಿಗೆ ಸೆರೆಸಿಕ್ಕಿದ್ದ ಘಟನೆಯನ್ನು ಸ್ಮರಿಸಬಹುದಾಗಿದೆ.ಅಲ್ಲದೆ, ಸಮೀಪದ ಐತಿಹಾಸಿಕ ಗ್ರಾಮ ಕೊಡಗಾನೂರ ಹೊರವಲಯ ದಲ್ಲಿನ ಹೊಲವೊಂದರಲ್ಲಿನ ಐತಿಹಾಸಿಕ ಲಿಂಗವನ್ನು ತುಂಡರಿಸಿದ ಪ್ರಕರಣ ನಿಧಿಗಳ್ಳರ ವಿಕೃತಿ ಮನೋಭಾವಕ್ಕೆ ಪುಷ್ಠಿ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ.ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆಗಳು ಇಲ್ಲಿನ ಐತಿಹಾಸಿಕ ಹಾಗೂ ಪೌರಾಣಿಕ ಪ್ರೇಕ್ಷಣೀಯ ಸ್ಥಳಗಳಿಗೆ ಕಾಯಕಲ್ಪ ಒದಗಿಸುವುದು ಇರಲಿ, ಕನಿಷ್ಠ ಪಕ್ಷ ಅವುಗಳ ಸುರಕ್ಷತೆಯನ್ನು ಒದಗಿಸಲು ಮುಂದಾಗ  ದಿರುವುದರಿಂದಾಗಿಯೇ ಬೆಟ್ಟದ ಮೇಲೆನ ಕೋಟೆ- ಕೊತ್ತಲ ಗಳು, ಅಕ್ಕ- ತಂಗಿಯರ ಹೊಂಡ, ಹುಲಿಹೊಂಡ, ಮಂಗನ ಹೊಂಡ, ಪಟ್ಟಣದ ರಾಜ ವಾಡೆಗಳು, ದೇವಸ್ಥಾನಗಳು ನಿಧಿ ಗಳ್ಳರ ಅಟ್ಟ ಹಾಸಕ್ಕೆ ಭಗ್ನಗೊಳ್ಳುತ್ತಿವೆ.ಐತಿಹಾಸಿಕ ಹಿನ್ನೆಲೆ: ಮರಾಠರ ಆಳ್ವಿಕೆಯ ಬಳಿಕ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಲಾಜಿ ಬಾಜಿರಾವ್ ಕ್ರಿ.ಶ 1710 ರಿಂದ 1757 ರ ವರೆಗೆ ಆಡಳಿತ ನಡೆಸಿದರು. ಇವರ ಆಳ್ವಿಕೆ ಯಲ್ಲಿಯೇ ಕೋಟೆ-ಕೋತ್ತಲ, ದೇವಾಲಯ, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು.ಸುದೀರ್ಘ 15 ವರ್ಷಗಳ ಕಾಲ ನಿರಂತರ ಪರಿಶ್ರಮದಿಂದಾಗಿ 800 ಅಡಿ ಎತ್ತರದ ಐತಿಹಾಸಿಕ ಬೆಟ್ಟದ ತುದಿಯಲ್ಲಿ ಆಕರ್ಷಣೀಯ ಕೋಟೆ ಯನ್ನು ನಿರ್ಮಿಸಲಾಗಿದೆ.ಈ ಕೋಟೆ ಇಂದಿಗೂ ಪ್ರೇಕ್ಷಕರನ್ನು ಆಕರ್ಷಿಸು ವುದಷ್ಟೇ ಅಲ್ಲದೆ, ಪ್ರತಿಯೊಬ್ಬರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ. ಆದರೆ, ಇಂತಹ ಅಭೇದ್ಯ ಕೋಟೆ ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ನಿಧಿಗಳ್ಳರ ಸಂಶೋಧನ ಕೇಂದ್ರ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು ವಿಪರ್ಯಾಸವೇ ಸರಿ.ವೈರಿ ಪಡೆ ದಾಳಿಗಳನ್ನು ಸಮರ್ಥ ವಾಗಿ ಎದುರಿಸುವ ಉದ್ದೇಶದಿಂದಾಗಿ ಕೋಟೆಯನ್ನು ಪ್ರವೇಶಿಸುವ ದ್ವಾರದ ಬಳಿ ಪಶ್ಚಿಮಕ್ಕೆ ಮದ್ದಿನ ಮನೆ ಹಾಗೂ ತೊಟ್ಟಿಲು ನಿರ್ಮಿಸಲಾಗಿದೆ.ಕೋಟೆಯ ಒಳಗಿನಿಂದಲ್ಲೇ ಪಿರಂಗಿ ಹಾರಿಸಿ ವೈರಿಗಳನ್ನು ಸೆದೆ ಬಡಿಯಲು ಅಗತ್ಯ ವಿರುವ ಮದ್ದು, ಗುಂಡುಗಳ ಸಂಗ್ರಹ ಕ್ಕಾಗಿ ವ್ಯವಸ್ಥಿತ ಮದ್ದಿನ ಮನೆ ನಿರ್ಮಿಸಲಾಗಿದೆ.ತೊಟ್ಟಿಲು ಹುಡೇದ ಹಿಂಭಾಗದಲ್ಲಿ ಹುಲಿ ಹೊಂಡವಿದೆ. ಈ ಹೊಂಡದ ಪಶ್ಚಿಮ ದಿಕ್ಕಿಗೆ ಹುಲಿ, ಪೂರ್ವದಿಕ್ಕಿಗೆ ಬಸವಣ್ಣ ಪ್ರತಿಮೆ ಇವೆ. ಹುಲಿಯ ಪ್ರತಿಮೆ ಪರಾಕ್ರಮ ಸಂಕೇತವಾದರೆ, ನಂದಿ ಪೂಜ್ಯತೆ ಹಾಗೂ ನಮ್ರತೆಯ ಸಂಕೇತ. ಇವುಗಳನ್ನು ಸಹ ನಿಧಿಗಳ್ಳಲು ತುಂಡರಿಸಿ ವಿಕಾರಗೊಳಿಸಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.ಇವುಗಳ ಪಕ್ಕದಲ್ಲಿಯೇ ಅಕ್ಕ- ತಂಗಿಯರ ಹೊಂಡಗಳಿವೆ. ಮಳೆ ಗಾಲದಲ್ಲಿ ಈ ಹೊಂಡಗಳ ಸೌಂದರ್ಯ ಅಮೋಘ. ಹೊಂಡಗಳ ಸುತ್ತಲ್ಲೂ ಹರಡಿದ ಪ್ರಶಾಂತ ಪರಿಸರ `ಹಿಮಾಲಯದ ಮಾನಸ ಸರೋವರ~ವನ್ನು ಹೋಲುತ್ತಿರುತ್ತದೆ.ಗಜೇಂದ್ರಗಡದ ಬೆಟ್ಟ ಹಾಗೂ ಕೋಟೆಗಳು ಪ್ರಸಿದ್ಧ, ಪ್ರಚಾರಗಳಿಂದ ವಂಚಿತಗೊಂಡಿದ್ದರೂ, ಶತಮಾನಗಳಿಂದ ತಮ್ಮ ಅಚ್ಚಳಿಯದ ಪ್ರಭಾವವನ್ನು ಬೀರುತ್ತಲೇ ಇರುವ ಇವುಗಳಿಗೆ ನಿಧಿಗಳ್ಳರ ಹಾವಳಿ ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry