ಮಂಗಳವಾರ, ಮೇ 17, 2022
24 °C

ಅಂಕಿ, ಅಂಶ ಮನುಷ್ಯನ ಬದುಕಿಗೆ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಜೀವನದ ಜಂಜಾಟದಲ್ಲಿ ಕಾಲಕಳೆಯುತ್ತಿರುವ ಮನುಷ್ಯನ ಬದುಕಿಗೆ ಅಂಕಿ, ಸಂಖ್ಯೆಗಳ ಅರಿವು ಅವಶ್ಯವಾಗಿದ್ದು, ಇವುಗಳ ಸಂಪೂರ್ಣ ಮಾಹಿತಿ ಮತ್ತು ಮಹತ್ವ ತಿಳಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ~ ಎಂದು ಹಾವೇರಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎಂ.ಎಸ್.ಕುರ್ತಕೋಟಿ ಹೇಳಿದರು.ಆರ್ಥಿಕ ಮತ್ತು ಸಾಂಖ್ಯಿಕ ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳ ಕಚೇರಿ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲ ಯಗಳ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಸಾಂಖ್ಯಿಕ ದಿನಾಚರಣೆ ಕಾರ್ಯ ಕ್ರದಲ್ಲಿ ಅವರು ಮಾತನಾಡಿದರು.ಅಂಕಿ, ಸಂಖ್ಯೆಗಳ ಬಗ್ಗೆ ಜನರು ಬಹ ಳಷ್ಟು ನಿರ್ಲಕ್ಷ್ಯವಹಿಸುತ್ತಾರೆ. ಯಾವು ದಾದರೂ ಅಂಕಿ, ಸಂಖ್ಯೆಯ ಅವಶ್ಯಕತೆ ಯಿದ್ದಾಗ ಅದಕ್ಕಾಗಿ ತಡಕಾಡುತ್ತಾರೆ. ಬದಲಿಗೆ ಮೊದಲಿನಿಂದಲೇ ಆ ಬಗ್ಗೆ ಆಸ್ಕತಿ ಹೊಂದಿದರೆ, ತಡಕಾಡುವ ಸ್ಥಿತಿ ತಪ್ಪಿಸಬಹುದಾಗಿದೆ ಎಂದರು.ಜಿಲ್ಲಾ ಸಹಾಯಕ ನಿರ್ದೇಶಕ ಎಚ್.ವೈ. ಮೀಸಿ ಮಾತನಾಡಿ, ಇಂದು ರಾಜ್ಯ-ಕೇಂದ್ರ ಸರ್ಕಾರಗಳೂ ನೀಡುವ ಅಂಕಿ-ಅಂಶಗಳ ಮೇಲೆಯೇ ನಾವಿಂದು ಹಣಕಾಸಿನ ವಿಷಯವಾಗಿ ವ್ಯವಹರಿಸು ತ್ತಿವೆ. ಸರ್ಕಾರದ ಆದೇಶದ ಮೇರೆಗೆ ಆರೋಗ್ಯ, ಶಿಕ್ಷಣ ವಿಭಾಗಗಳಲ್ಲಿ ಅಂಕಿ-ಅಂಶಗಳನ್ನು ಪಡೆದು ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದರು.ಜನನ-ಮರಣ, ಮಳೆ ಮಾಪನ, ಕೃಷಿ ವಲಯ, ಬೆಳೆ ವಿಮೆ, ರಾಷ್ಟ್ರೀಯ ಮಾದರಿಗಳ ಅಂಕಿ-ಅಂಶಗಳನ್ನು ಕ್ರೋಢಿಕರಿಸಿ ಸಾಮಾನ್ಯರಿಗೂ ಇದರ ಮಹತ್ವ ತಿಳಿಸುವ ಉದ್ದೆೀಶದಿಂದ ವಿಶ್ವ ಸಾಂಖ್ಯಿಕ ದಿನಾಚರಣೆ ಆಚರಿಸಲಾಗು ತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲ ಯದ ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಮಾತನಾಡಿ, ಮನುಷ್ಯ ಜೀವನದಲ್ಲಿ ಅಂಕಿ ಸಂಖ್ಯೆಗಳ ಪರಿಚಯ ಇಲ್ಲದೇ ಹೋದರೆ ಬದುಕು ಸೂತ್ರ ವಿಲ್ಲದ ಗಾಳಿಪಟದಂತೆ ಎಂದು ಅಭಿಪ್ರಾಯಪಟ್ಟರು.ಡಾ.ಎಸ್.ಕೆ.ನಾಶಿಯವರು ಹಾಗೂ ಸಾಂಖ್ಯಿಕ ಇಲಾಖೆಯ ಸಿಬ್ಬಂದಿ ಉಪನ್ಯಾಸ ನೀಡಿದರು. ಮಹಾ ವಿದ್ಯಾಲಯದ ಬೋಧಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸವಿತಾ ಚಿಂಚಲಿ ಪ್ರಾರ್ಥಿಸಿದರು. ದೀಪಾ ಸಂಗಮ ವಂದಿಸಿದರು. ಜಿ.ವಿ.ಸಾಲಿಮಠ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.