ಗುರುವಾರ , ಜನವರಿ 23, 2020
22 °C

ಅಂಗಡಗೇರಿ: ಸಿಡಿಲಿಗೆ ಎತ್ತುಗಳ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಅಂಗಡಗೇರಿ ಗ್ರಾಮದಲ್ಲಿ ಗುರುವಾರ ಸಿಡಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಈಚೆಗೆ ಜರುಗಿದೆ.ಅಂಗಡಗೇರಿ ಗ್ರಾಮದ ಚಂದ್ರಪ್ಪ ಬಸಪ್ಪ ಚಲವಾದಿ ಅವರಿಗೆ ಸೇರಿದ ಈ ಎರಡು ಎತ್ತುಗಳನ್ನು ಹೊಲದಲ್ಲಿ ಕಟ್ಟಲಾಗಿತ್ತು. ಗುಡುಗು ಸಹಿತ ಮಳೆಯಾದಾಗ ಸಿಡಲಿಗೆ ಈ ಎರಡು ಎತ್ತುಗಳು ಬಲಿಯಾಗಿವೆ. ಎತ್ತುಗಳು 70 ಸಾವಿರ ರೂಪಾಯಿ ಬೆಲೆಬಾಳುತ್ತವೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪಿ.ಎಸ್.ಐ. ರಮೇಶ ಕಾಂಬಳೆ ಭೇಟಿ ನೀಡಿದ್ದರು.

ಪ್ರತಿಕ್ರಿಯಿಸಿ (+)