ಅಂಗನವಾಡಿ ಕಾರ್ಯಕರ್ತೆಯರಿಂದ ಜೈಲ್‌ ಭರೋ

7

ಅಂಗನವಾಡಿ ಕಾರ್ಯಕರ್ತೆಯರಿಂದ ಜೈಲ್‌ ಭರೋ

Published:
Updated:
ಅಂಗನವಾಡಿ ಕಾರ್ಯಕರ್ತೆಯರಿಂದ ಜೈಲ್‌ ಭರೋ

ಧಾರವಾಡ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಯೋಜನೆಯನ್ನು ಪುನರ್‌­ರಚಿ­ಸುವ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದ್ದು, ಈ ನೀತಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ 700ಕ್ಕೂ ಅಧಿಕ ಅಂಗನವಾಡಿ ಕಾರ್ಯ­ಕರ್ತೆಯರು ಮತ್ತು ಸಹಾಯಕಿಯರು ಶುಕ್ರವಾರ ಜೈಲ್‌ ಭರೋ ಚಳವಳಿ ನಡೆಸಿದರು.ನಗರದಲ್ಲಿ ಪ್ರತಿಭಟನಾ ರ್‍್ಯಾಲಿ ನಡೆಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶದ ಅಂಗನವಾಡಿ ಕಾರ್ಯ­ಕರ್ತೆಯರು ಹಾಗೂ ಸಹಾಯಕಿಯರು ಜೈಲ್‌ ಭರೋ ಚಳವಳಿಯಲ್ಲಿ ಪಾಲ್ಗೊಂಡಿದ್ದರು.ಐಸಿಡಿಎಸ್ ಯೋಜ­ನೆಯು 1975ರಲ್ಲಿ ಪ್ರಾರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಅಂಗನವಾಡಿ ಶಾಲೆಗಳಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯ ನಿರ್ವ­ಹಿಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಆಟ ಪಾಠ­ಗಳೊಂದಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡುವ ಜೊತೆಗೆ ಆರೋಗ್ಯ ಮಟ್ಟವನ್ನು ಸುಧಾರಿ­ಸುತ್ತಾ ಬಂದಿದ್ದಾರೆ.  ಈ ಯೋಜನೆ ಅಲ್ಲದೇ ಹಲವಾರು ಯೋಜನೆಗಳಾದಂತಹ ಐಜಿಎಂಎಸ್, ಚುನಾವಣೆ ಕೆಲಸ ಮತ್ತು ಇನ್ನಿತರ ಹಲವಾರು ಯೋಜನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿ­ಕೊಳ್ಳುತ್ತಾರೆ.ಈಗಿನ ಬೆಲೆ ಏರಿಕೆ ದಿನಗಳಲ್ಲಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ರೂ. 3 ಸಾವಿರ ಹಾಗೂ ಸಹಾಯಕಿಯರಿಗೆ  ರೂ. 1500 ರೂಪಾಯಿಗಳು ಹಾಗೂ ರಾಜ್ಯ ಸರ್ಕಾರದಿಂದ ಕಾರ್ಯಕರ್ತೆಯರಿಗೆ ರೂ. 2 ಸಾವಿರ, ಸಹಾಯ­ಕಿಯರಿಗೆ ರೂ. 1 ಸಾವಿರ ಮಾತ್ರ ಪ್ರತಿ ತಿಂಗಳು ನೀಡುತ್ತಾ ಬರುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಂಗನವಾಡಿ ಕಾರ್ಯಕರ್ತೆ­ಯರು ಹಾಗೂ ಸಹಾಯಕಿ­ಯರನ್ನು ಸಂಪೂರ್ಣ­ವಾಗಿ ಕಡೆಗಣಿಸಿವೆ’ ಎಂದು ಪ್ರತಿಭಟನಾಕಾರರು ಟೀಕಿಸಿದರು.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಸಿ ಗ್ರೂಪ್ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಕಾಯಂ­ಗೊಳಿಸಬೇಕು. ಸರ್ಕಾರದ ಎಲ್ಲ ಸೌಲಭ್ಯ­ಗಳನ್ನು ನೀಡಬೇಕು. ಅಂಗನವಾಡಿ ಕಾರ್ಯ­ಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ತಿಂಗಳಿಗೆ ರೂ. 12,500 ಸಾವಿರ ನೀಡಬೇಕು. ಸೇವಾ ಅವಧಿಯ ಆಧಾರದಲ್ಲಿ ಹೆಚ್ಚುವರಿಯಾಗಿ ವರ್ಷಕ್ಕೆ ರೂ. 200 ರೂಪಾಯಿ ನೀಡಬೇಕು. ಕೇಂದ್ರ ಸರ್ಕಾರದ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿ­ಯರಿಗೂ ಸಹ 6 ತಿಂಗಳ ಹೆರಿಗೆ ರಜೆ ಮತ್ತು ಎಲ್ಲಾ ರೀತಿಯ ಭತ್ಯೆಗಳನ್ನು ನೀಡಬೇಕು ಎಂಬ ಇತ್ಯಾದಿ ಬೇಡಿಕೆಗಳಿರುವ ಮನವಿಯಲ್ಲಿ ಜಿಲ್ಲಾಧಿ­ಕಾರಿಗಳಿಗೆ ಸಲ್ಲಿಸಲಾಯಿತು.ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ನವಲಗುಂದ ತಾಲ್ಲೂಕಾ ಅಧ್ಯಕ್ಷೆ ಲತೀಫಾ ಬಾಗಲಕೋಟೆ, ಧಾರವಾಡ ಗ್ರಾಮೀಣ ಕ್ಷೇತ್ರದ ಅಧ್ಯಕ್ಷೆ ಸಾವಕ್ಕ ಕಮ್ಮಾರ, ವೀರಮ್ಮ ತುರಕಾಣಿ, ಶಂಕ್ರಮ್ಮ ಹಿರೇಮಠ, ಸಂಧ್ಯಾ ಕುಲಕರ್ಣಿ, ಶಶಿಕಲಾ ಜಾಲಗಾರ ವಹಿಸಿದ್ದರು.ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದ ಕೆಲ ಕಾರ್ಯಕರ್ತರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ ಕರೆ­ದೊಯ್ದು ಮತ್ತೆ ಬಿಡುಗಡೆಗೊಳಿಸಿದರು.ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ:
‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮಾಸಿಕ ಕನಿಷ್ಠ ರೂ. 12,500 ವೇತನ ನೀಡಬೇಕು. ‘ಸಿ’ ಮತ್ತು ಡಿ ಗ್ರೂಪ್‌ ನೌಕರರೆಂದು ಪರಿಗಣಿಸಿ ಎಲ್ಲ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ  ಹಾಗೂ ಜೈಲ್‌ ಭರೋ ಚಳವಳಿ ನಡೆಸಿದರು.ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ‘ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯ ಕೆಲಸ­ಗಳನ್ನು ವಹಿಸಬಾರದು. ಇಎಸ್‌ಐ, ಪಿಎಫ್‌ ಸೌಲಭ್ಯ ಕಲ್ಪಿಸಬೇಕು. ದಿನಭತ್ಯೆಯನ್ನು ಹೆಚ್ಚಿಸ­ಬೇಕು. ಗಣ್ಯ ವ್ಯಕ್ತಿಗಳು ಬರುವ ಸಂದರ್ಭ ಅವರ ಸ್ವಾಗತಕ್ಕೆ ಕುಂಭ ಹೊತ್ತು ಬರಬೇಕು ಎಂಬ ಆದೇಶವನ್ನು ನಿಲ್ಲಿಸಬೇಕು. ಕಾರ್ಯಕರ್ತೆಯರಿಗೆ ನೀಡಲಾಗುವ ಗೌರವ ಧನದಲ್ಲಿ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸಿ ಸರ್ಕಾರದಿಂದಲೇ ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಹುಬ್ಬಳ್ಳಿ ಹಾಗೂ ಸುತ್ತಲಿನ ತಾಲ್ಲೂಕುಗಳ ಅಂಗನವಾಡಿಯ ನೂರಾರು ಕಾರ್ಯಕರ್ತೆ­ಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry