ಸೋಮವಾರ, ಮೇ 16, 2022
24 °C

ಅಂಗನವಾಡಿ ಕೇಂದ್ರ: ಅಪಾಯಕಾರಿಯಾದ ಬಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಸಮೀಪದ ಕುಂದನೂರು ಗ್ರಾಮದಲ್ಲಿ ನಿರ್ಮಿಸುತ್ತಿರುವ ನೀರು ಶುದ್ಧೀಕರಣ ಘಟಕಕ್ಕೆ ಶನಿವಾರ ಚಿತ್ತಾಪುರ ಶಾಸಕ ವಾಲ್ಮೀಕ ನಾಯಕ ಭೇಟಿ ನೀಡಿ ಪರಿಶೀಲಿಸಿದರು.`ಕೆಲವು ತಿಂಗಳ ಹಿಂದೆಯೇ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗಿದ್ದರೂ, ಮಧ್ಯೆಯೇ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಜನ ಎಷ್ಟು ದಿನ ಕಾಯಬೇಕು?~ ಎಂದು ಪ್ರಶ್ನಿಸಿದ ಶಾಸಕರು, `ಕೂಡಲೇ ಕಾಮಗಾರಿ ಚುರುಕುಗೊಳಿಸಿ, ಬೇಗ ಮುಗಿಸಬೇಕು~ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.`ಈಗಾಗಲೇ ಘಟಕದ ಶೇ.95ರಷ್ಟು ಕಾಮಗಾರಿ ಮುಗಿದಿದೆ. ಆದ್ದರಿಂದ ಜುಲೈ 15ಕ್ಕೆ ಶುದ್ಧೀಕರಣ ಘಟಕ ಪುರಸಭೆಗೆ ಹಸ್ತಾಂತರಿಸಲಾಗುವುದು~ ಎಂದು ಜಿಲ್ಲಾ ಕರ್ನಾಟಕ ಜಲ ಮಂಡಳಿ ಸಹಾಯಕ ಅಧಿಕಾರಿ ಸಯ್ಯದ್ ಝಹೀರ್ ಉಲ್ ಹಕ್ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ, ಬಿಜೆಪಿ ಮುಖಂಡರಾದ ಸಿದ್ದಣ್ಣ ಕಲಶೆಟ್ಟಿ, ಗಿರಿಮಲಪ್ಲ್ಪ ಕಟ್ಟಿಮನಿ ಇದ್ದರು.ರೈತರ ಆಕ್ರೋಶ: `ಶುದ್ಧೀಕರಣ ಘಟಕದಿಂದ ಹರಿಯುವ ನೀರು ಜಮೀನುಗಳಲ್ಲಿ ನುಗ್ಗುತ್ತಿದೆ. ಬೆಳೆಗಳು ಹಾಳಾಗುತ್ತಿವೆ. ಆದ್ದರಿಂದ ಕೂಡಲೇ ನೀರು ಸೋರಿಕೆಯನ್ನು ತಡೆಯಬೇಕು. ಇಲ್ಲದಿದ್ದರೆ ಕಾಮಗಾರಿಗೆ ಅಡ್ಡಿಪಡಿಸಲಾಗುವುದು~ ಎಂದು ರೈತರಾದ ಅಮ್ಜದ್ ಪಟೇಲ, ಬಾಬಾ ಪಟೇಲ ಹಾಗೂ ಯಾಸೀನ್ ಪಟೇಲ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.