ಬುಧವಾರ, ಮಾರ್ಚ್ 3, 2021
31 °C

ಅಂಗನವಾಡಿ ಕೇಂದ್ರ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗನವಾಡಿ ಕೇಂದ್ರ ಖಾಸಗೀಕರಣಕ್ಕೆ ವಿರೋಧ

ಹಾಸನ: ‘ಅಂಗನವಾಡಿ ಕೇಂದ್ರ ಖಾಸಗೀಕರಣ ಪ್ರಸ್ತಾಪ ಕೈಬಿಡುವುದು, ನೌಕರರಿಗೆ ಕನಿಷ್ಠ ರೂ. 10 ಸಾವಿರ ವೇತನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಐ.ಸಿ.ಡಿ.ಎಸ್‌. ಯೋಜನೆಯನ್ನು ಖಾಸಗಿ ಸಂಸ್ಥೆಗಳ ಕೈಗೆ ಕೊಡಬಾರದು, ಕೇಂದ್ರಗಳಲ್ಲಿ ಕೆಲಸದ ಅವಧಿ ಹೆಚ್ಚಿರುವುದರಿಂದ ಮತ್ತು 45ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸಿನಂತೆ ನೌಕರರಿಗೆ 10 ರಿಂದ 15 ಸಾವಿರ ವೇತನ ನೀಡಬೇಕು, ಕೇಂದ್ರಗಳನ್ನು ಶಾಲಾ ಪೂರ್ವ ಶಿಕ್ಷಣ ಜಾರಿ ಮಾಡುವ ನೋಡಲ್‌ ಕೇಂದ್ರಗಳನ್ನಾಗಿಸಬೇಕು.ಶಾಲಾ ಪೂರ್ವ ಶಿಕ್ಷಣ ಮತ್ತು ಆರೋಗ್ಯ ಕಿಟ್‌, ಅಡುಗೆ ಪಾತ್ರೆ, ಆಟಿಕೆಗಳನ್ನು ಅಂಗನವಾಡಿ ಕೇಂದ್ರಗಳಿಗೆ ನೀಡುವಾಗ ಪಾರದರ್ಶಕತೆ ಕಾಪಾಡ­ಬೇಕು... ಮುಂತಾದ 22 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿಪತ್ರವನ್ನು ಸಲ್ಲಿಸಿದರು.ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಲಕ್ಷ್ಮಿ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಆರ್‌. ಮಂಜಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಎಚ್‌.ಆರ್. ನವೀನ್‌ ಕುಮಾರ್‌ ಹಾಗೂ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.