ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಆದೇಶ

7

ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಆದೇಶ

Published:
Updated:
ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಆದೇಶ

ಬೆಂಗಳೂರು:- ನಗರದ ರಾಮಚಂದ್ರಾ ಪುರದಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.ರಾಮಚಂದ್ರಾಪುರ ಅಂಗನವಾಡಿ ಕೇಂದ್ರ ಮೊದಲು ಸುಸಜ್ಜಿತ ಕಟ್ಟಡದಲ್ಲಿ ಇತ್ತು. ಕೆಲವು ದಿನಗಳ ಹಿಂದೆ ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಆಗಿತ್ತು. ಆ ಕಟ್ಟಡದಲ್ಲಿ ಅನೇಕ ಸಮಸ್ಯೆ ಗಳಿದ್ದು, ಅದನ್ನು ಸಚಿವರ ಗಮನಕ್ಕೆ ತರಲಾಯಿತು. ಕಟ್ಟಡದ ಬಾಗಿಲಲ್ಲೇ ಮಕ್ಕಳಿಗೆ ಕೈಗೆ ಎಟುಕುವ ಹಾಗೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಮಾಡಲಾಗಿದ್ದು, ತುಂಬಾ ಅಪಾಯಕಾರಿ ಆಗಿದೆ.  ಈ ಕೇಂದ್ರದ ಪಕ್ಕದಲ್ಲಿಯೇ ರಾಜಕಾಲುವೆ ಹರಿದು ಹೋಗಿದ್ದು, ದುರ್ವಾಸನೆ ಬೀರುತ್ತಿದ್ದು ದನ್ನು ಸಚಿವರು ಗಮನಿಸಿದರು.ಸ್ಥಳೀಯ ಪಾಲಿಕೆ ಸದಸ್ಯೆ ಕ್ವೀನ್ ಎಲಿ ಜಬೆತ್ ಅವರೊಂದಿಗೆ ಮಾತನಾಡಿ ಅಂಗನವಾಡಿ ಕೇಂದ್ರವನ್ನು ಮೊದಲಿದ್ದ ಕಟ್ಟಡಕ್ಕೆ ನಾಳೆಯೇ ಸ್ಥಳಾಂತರಿಸಬೇಕು ಎಂದು ತಿಳಿಸಿದರು.ಅವರು ಸಹ ಅದಕ್ಕೆ ಸ್ಪಂದಿಸಿ ಒಪ್ಪಿಗೆ ಸೂಚಿಸಿದರು. ಮಕ್ಕಳಿಗೆ ಆಹಾರ ಬೇಯಿಸಲು ಗ್ಯಾಸ್ ಸಮಸ್ಯೆ ಇದ್ದರೆ ವಿದ್ಯುತ್ ಒಲೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry