ಅಂಗನವಾಡಿ ಗೌರವಧನ ಏರಿಕೆ

7
ಸಚಿವೆ ಉಮಾಶ್ರೀ ಹೇಳಿಕೆ

ಅಂಗನವಾಡಿ ಗೌರವಧನ ಏರಿಕೆ

Published:
Updated:

ಬೆಂಗಳೂರು: ಬಜೆಟ್‌ನಲ್ಲಿ ಮಾಡಿದ ಘೋಷಣೆಯಂತೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹಾಗೂ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಹೆಚ್ಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.ಸೋಮವಾರ ವಿಕಾಸಸೌಧದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಗ್ಗೆ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ ಎಂದರು.ಅಂಗನವಾಡಿ ಕಾರ್ಯಕರ್ತೆಯರಿಗೆ ₨ 500, ಸಹಾಯಕಿಯರಿಗೆ ₨ 250, ಮಿನಿ ಅಂಗನವಾಡಿ ಕಾರ್ಯಕರ್ತೆ ಯರಿಗೆ ₨ 250 ಹೆಚ್ಚಳ ಮಾಡಲಾಗಿದೆ.ಪೌಷ್ಟಿಕ ಆಹಾರ ಘಟಕ ವೆಚ್ಚ ಹೆಚ್ಚಳ:  ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಬಳ್ಳಾರಿ, ಗುಲ್ಬರ್ಗಾ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲೆಗಳ ಪೌಷ್ಟಿಕ ಆಹಾರ ಘಟಕಗಳ ವೆಚ್ಚ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.6 ತಿಂಗಳಿಂದ 72 ತಿಂಗಳ ಪ್ರತಿ ಮಗುವಿನ ವೆಚ್ಚ ದಿನಕ್ಕೆ ₨4 ರಿಂದ ₨ 6ಕ್ಕೆ ಹೆಚ್ಚಿಸಲಾಗಿದೆ.  ಹಾಗೆಯೇ ತೀರ ಅಪೌಷ್ಟಿಕತೆಯ ಮಕ್ಕಳ ವೆಚ್ಚವನ್ನು ದಿನಕ್ಕೆ ₨ 6 ರಿಂದ ದಿನಕ್ಕೆ ₨9 ಕ್ಕೆ ಹೆಚ್ಚಿಸಲಾಗಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗುವ ವೆಚ್ಚ ದಿನಕ್ಕೆ ₨ 5 ರಿಂದ ದಿನಕ್ಕೆ ₨7ಕ್ಕೆ ಪರಿಷ್ಕರಿಸಿ ಅದೇಶ ಹೊರಡಿಸಲಾಗಿದೆ. ಇನ್ನೂ ೮ ಜಿಲ್ಲೆಗಳಲ್ಲಿ ಈ ರೀತಿಯ ವೆಚ್ಚ ಹೆಚ್ಚಳಕ್ಕೆ ಮಂಜೂರಾತಿ ದೊರಕಿದ್ದು, ಸದ್ಯದಲ್ಲೇ ಆದೇಶ ಹೊರಡಿಸ ಲಾಗುವುದು ಎಂದು ಸಚಿವರು ತಿಳಿಸಿದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry