ಗುರುವಾರ , ಏಪ್ರಿಲ್ 22, 2021
28 °C

ಅಂಗನವಾಡಿ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಅಂಗನವಾಡಿ ನೂರಾರು ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಎಸ್.ಎಫ್.ಸಂಜೀವಣ್ಣವರಿಗೆ ಮನವಿ ಅರ್ಪಿಸಿದರು.ಕೇಂದ್ರ ಸರ್ಕಾರದ ಪುರಸ್ಕೃತ ಸಮಗ್ರ ಶಿಶು ಅಭಿವೃದ್ಧಿ ಕಲ್ಯಾಣ ಯೋಜನೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುವ ಅಂಗನವಾಡಿಯಲ್ಲಿ ಸುಮಾರು 1.25 ಲಕ್ಷಕ್ಕಿಂತ ಹೆಚ್ಚಿನ ಕಾರ್ಯಕರ್ತೆರು ಹಾಗೂ ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ.

 

ಅಲ್ಲದೆ ಬಾಣಂತಿಯರ, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ಚುಚ್ಚು ಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ತಾಯಿಯಂದಿರ ಆರೋಗ್ಯ, ಸುಮಾರು 3ರಿಂದ6 ವರ್ಷದ ಮಕ್ಕಳಿಗೆ ಅನೌಪಚಾರಿಕ ಶಾಲಾ ಪೂರ್ವ ಶಿಕ್ಷಣ ನೀಡುವ ಜೊತೆಗೆ ಸಾರ್ವಜನಿಕರೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸು ತ್ತಿದ್ದಾರೆ. ಆದರೂ ಕೆಲಸ ಭದ್ರತೆಯಿಲ್ಲ ಬದುಕಿಗಾಗಿ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಯಕರ್ತೆಯರನ್ನು ಹಾಗೂ ಸಹಾಯಕಿಯರನ್ನು ಸಿ ಹಾಗೂ ಡಿ ಗ್ರುಪ್ ನೌಕರರೆಂದು ಖಾಯಂ ಮಾಡ ಬೇಕು. ಸುಮಾರು 10 ಸಾವಿರ ವೇತನ ನಿಗದಿ ಪಡಿಸಬೇಕು ಎಂದು ಸೇರಿದಂತೆ ಅನೇಕ ಬೇಡಿಕೆ ಬಗ್ಗೆ ಒತ್ತಾಯಿಸಿದರು

ಜಿಲ್ಲಾ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರೆಣ್ಣ ವರ, ನಿರ್ಮಲಾ ನೇಮಣ್ಣನವರ, ಗಂಗಮ್ಮಾ ಅಣ್ಣಿಗೇರಿ,  ಲಲಿತಮ್ಮಾ ನಾಗನಗೌಡ್ರ, ಜಿ.ಎನ್.ಕೊಡ್ಲಿವಾಡ,  ಶಂಬಕ್ಕಾ ಕೋರಿ, ಇಂದ್ರಾ ಭಜಂತ್ರಿ, ಅಕ್ಕಮಹಾದೇವಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.