ಅಂಗರಚನಾಶಾಸ್ತ್ರ ನಾಳೆಯಿಂದ ಸಮ್ಮೇಳನ

7

ಅಂಗರಚನಾಶಾಸ್ತ್ರ ನಾಳೆಯಿಂದ ಸಮ್ಮೇಳನ

Published:
Updated:

ಬೆಂಗಳೂರು: ‘ಸಪ್ತಗಿರಿ ವೈದ್ಯಕೀಯ ಮಹಾ­ವಿದ್ಯಾಲಯ ಮತ್ತು ಸಂಶೋ­ಧನಾ ಕೇಂದ್ರದಿಂದ ಇದೇ 13ರಿಂದ 15ರವರೆಗೆ ಅಂಗರಚನಾ­ಶಾಸ್ತ್ರದ  15ನೇ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದು ಸಪ್ತಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶು­­ಪಾಲೆ ಡಾ.ಜಯಂತಿ ತಿಳಿಸಿದರು.ಹೆಸರಘಟ್ಟ ಮುಖ್ಯರಸ್ತೆ ಬಳಿಯ ಚಿಕ್ಕ­ಸಂದ್ರದ ಸಪ್ತಗಿರಿ ವೈದ್ಯಕೀಯ ವಿದ್ಯಾ­ಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ­ವಿ.ವಿ ಕುಲಪತಿ ಶ್ರೀಪ್ರಕಾಶ್‌  ಸಮ್ಮೇಳನ ಉದ್ಘಾಟಿಸುವರು ಎಂದರು. ಸಮ್ಮೇಳನ­ದಲ್ಲಿ ದೇಶದ ವಿವಿಧ ಭಾಗ­ಗಳ 500ಕ್ಕೂ ಹೆಚ್ಚು ಅಂಗ­ರಚನಾ ಶಾಸ್ತ್ರದ ವೈದ್ಯರು, ಪ್ರಾಧ್ಯಾಪ­ಕರು ಭಾಗವಹಿಸ­ಲಿದ್ದಾರೆ. 300ಕ್ಕೂ ಸಂಶೋ­ಧನಾ ಪ್ರಬಂಧಗಳು ಮಂಡನೆ­ಯಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry