ಅಂಗಳದೊಳಗೆ ನುಗ್ಗಿದ ಅಭಿಮಾನಿ

7
ಕುಣಿದಾಡಿದ ಕ್ರಿಕೆಟ್ ಪ್ರೇಮಿಗಳು

ಅಂಗಳದೊಳಗೆ ನುಗ್ಗಿದ ಅಭಿಮಾನಿ

Published:
Updated:

ನಾಗಪುರ: ವಿರಾಟ್ ಕೊಹ್ಲಿ ಶತಕ ಗಳಿಸುತ್ತಿದ್ದಂತೆ ಗ್ಯಾಲರಿಯಿಂದ ಜಿಗಿದ ಅಭಿಮಾನಿಯೊಬ್ಬ ನೇರವಾಗಿ ಅಂಗಳದೊಳಗೆ ನುಗ್ಗಿಯೇ ಬಿಟ್ಟ. ಕ್ರೀಸ್‌ಗೆ ತೆರಳಿ ಕೊಹ್ಲಿಯನ್ನು ಆ      ಅಭಿಮಾನಿ ಅಭಿನಂದಿಸಿದ. ಕೊಹ್ಲಿ ಕೂಡ ಆ ಅಭಿಮಾನಿಗೆ ಹಸ್ತಲಾಘವ ನೀಡಿದರು.

ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.

ಆದರೆ ಅ ಅಭಿಮಾನಿಗೆ ಮುಂದೆ ಕಾದಿದ್ದು ಪೊಲೀಸರ ಲಾಠಿ ಏಟು. ಬಳಿಕ ಆತನನ್ನು ಕ್ರೀಡಾಂಗಣದಿಂದ ಹೊರಹಾಕಿದರು. ಸತತ ಸೋಲುಗಳಿಂದಾಗಿ ಆಕ್ರೋಶಕ್ಕೆ ಒಳಗಾಗಿದ್ದ ಅಭಿಮಾನಿಗಳು ತಂಡ ಕೊಂಚ ಉತ್ತಮ ಪ್ರದರ್ಶನ ನೀಡಲು ಶುರು ಮಾಡಿದರೆ ಯಾವ ರೀತಿ ವರ್ತಿಸುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿ.ದಿನದಾಟ ವೀಕ್ಷಿಸಲು 23 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಈ ಕ್ರೀಡಾಂಗಣ ನಗರದಿಂದ 18 ಕಿ.ಮೀ.ದೂರದಲ್ಲಿದೆ. ವಾಹನಗಳ ಓಡಾಟವೂ ಕಡಿಮೆ. ಆದರೂ ಇಷ್ಟು ಮಂದಿ ಆಗಮಿಸಿದ್ದು ವಿಶೇಷ. ಶತಕ ಗಳಿಸಿದ ಕೊಹ್ಲಿ ವಿಶೇಷ ಸಾಧನೆಯೊಂದಕ್ಕೆ ಪಾತ್ರರಾದರು. 2012ರಲ್ಲಿ ಎಲ್ಲಾ ಪ್ರಕಾರದ ಕ್ರಿಕೆಟ್ ಸೇರಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ಕೊಹ್ಲಿ ಈ ವರ್ಷ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಸೇರಿ 2091 ರನ್ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry