ಶುಕ್ರವಾರ, ನವೆಂಬರ್ 15, 2019
22 °C

ಅಂಗವಿಕಲನಿಂದ ನಾಮಪತ್ರ ಸಲ್ಲಿಕೆ

Published:
Updated:

ಮಳವಳ್ಳಿ: ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಕೀರ್ತಿನಗರದ ನಿವಾಸಿ ಮುತ್ತಯ್ಯ, ಕಮಲಮ್ಮ ದಂಪತಿ ಹಿರಿಯ ಪುತ್ರ ಎಂ.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು, ಹುಟ್ಟಿದ ಎರಡು ವರ್ಷಗಳ ನಂತರ ಪೋಲಿಯೊದಿಂದ ಕಾಲು ಕಳೆದುಕೊಂಡಿದ್ದಾರೆ.

`ಯಾವ ಜನಪ್ರತಿನಿಧಿಯೂ ಅಂಗವಿಕಲರ ಬಗ್ಗೆ ಗಮನ ನೀಡುತ್ತಿಲ್ಲ. ಅಂಗವಿಕಲರ ನೂರಾರು ಸಮಸ್ಯೆಗಳು ಪರಿಹರಿಸಿಲ್ಲ.ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದು ಶಾಸಕನಾಗಿ ಆಯ್ಕೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)