`ಅಂಗವಿಕಲರಲ್ಲಿ ಆತ್ಮವಿಶ್ವಾಸ ಬಿತ್ತಿ'

7

`ಅಂಗವಿಕಲರಲ್ಲಿ ಆತ್ಮವಿಶ್ವಾಸ ಬಿತ್ತಿ'

Published:
Updated:

ಬೆಂಗಳೂರು: `ಅಂಗವಿಕಲರಲ್ಲೂ ಆತ್ಮವಿಶ್ವಾಸ ಬಿತ್ತುವ ಕಾರ್ಯ ಮಾಡಿದಾಗ ಮಾತ್ರ ಏಳಿಗೆ ಸಾಧ್ಯ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.ಬೆಂಗಳೂರು ವಿಶ್ವವಿದ್ಯಾಲಯವು ಸೆಂಟ್ರಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಂಧ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ದೈಹಿಕ ನ್ಯೂನತೆಗಳು ಯಶಸ್ಸು ಗಳಿಸಲು ಅಡ್ಡಿಯಾಗುವುದಿಲ್ಲ ಎಂಬ ಅಂಶವನ್ನು ಎಲ್ಲರೂ ಮನಗಾಣಬೇಕು' ಎಂದು ಅಭಿಪ್ರಾಯಪಟ್ಟರು.`ಅಂಧರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಉದ್ಯೋಗ ಕೌಶಲಗಳನ್ನು ಕಲಿಸುವ ದೃಷ್ಟಿಗೆ ಪೂರಕವಾಗಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.ರಿಜಿಸ್ಟ್ರಾರ್ ಪ್ರೊ. ಕೆ.ಸೀತಮ್ಮ, `ದೈಹಿಕ ನ್ಯೂನತೆಯಿಂದ ಅಂಧರು ಧೃತಿಗೆಡಬೇಕಿಲ್ಲ. ನಿರಂತರ ಅಭ್ಯಾಸದಿಂದ ಉದ್ಯೋಗ ಕೌಶಲಗಳನ್ನು ರೂಢಿಸಿಕೊಂಡು ಉನ್ನತ ಮಟ್ಟಕ್ಕೆ ಏರಬಹುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry