ಶುಕ್ರವಾರ, ಜನವರಿ 24, 2020
21 °C

ಅಂಗವಿಕಲರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಶಾಸಕರ ಅನುದಾನದ ಅಡಿಯಲ್ಲಿ ಪೆಟ್ರೋಲ್‌ ರಹಿತ ತ್ರಿಚಕ್ರ ವಾಹನ ಹಂಚಿಕೆಯನ್ನು ಶೀಘ್ರ ಆರಂಭಿಸಬೇಕು ಎನ್ನುವುದು ಸೇರಿದಂತೆ ಜಿಲ್ಲೆಯಲ್ಲಿರುವ ಅಂಗವಿಕಲರ ಕುಂದುಕೊರತೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಆಖಿಲ ಕರ್ನಾಟಕ ಅಂಗವಿಕಲರ ಹೋರಾಟ ಸಮಿತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಅವರ ನಿವಾಸದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ವಿಕಲಚೇತನರ ಕಚೇರಿಯು ಸಾರ್ವಜನಿಕ ವಾಹನ ಓಡಾಟವಿಲ್ಲದ ಸ್ಥಳದಲ್ಲಿದ್ದು, ಕೂಡಲೇ ಅದನ್ನು ವಿಕಾಸಸೌಧಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಂಗವಿಕಲರ ಮಾಸಾಶನ, ಪಿಂಚಣಿ ಮಂಜೂರಿಗೆ ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ₨1,500 ಲಂಚ ಅಪಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಈ ರೀತಿಯ ದೂರುಗಳು ಬರದಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.ಅನೇಕ ಅಂಗವಿಕಲರು ಕೈಯಿಂದಲೇ ಮುಂದೆ ಸಾಗಬೇಕಾಗಿರುವುದರಿಂದ ಪಡಿತರ ಪಡೆಯುವ ಸಂದರ್ಭದಲ್ಲಿ ಹೆಬ್ಬೆಟ್ಟು ಗುರುತು ಸರಿಯಾಗಿ ಬೀಳುತ್ತಿಲ್ಲ. ಹೀಗಾಗಿ ಇಂತಹ ಅಂಗವಿಕಲರಿಗೆ ನಿರಂತರ ಪಡಿತರ ದೊರಕಿಸಲು ಅನುವು ಮಾಡಬೇಕು. ಅಂಗವಿಕಲರಿಗೆ ವಸತಿ ಯೋಜನೆ ಅಡಿಯಲ್ಲಿ ಮನೆಗಳು ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.ಸಮಿತಿ ಅಧ್ಯಕ್ಷ ಮಂಜೂರ ಪಟೇಲ ನೇತೃತ್ವ ವಹಿಸಿದ್ದರು. ಶಿವಶರಣ ರಟಕಲ್‌, ಮಚೇಂದ್ರನಾಥ ಗಾಜರೆ, ಬಸವರಾಜ ಹಾಲಗಡ್ಡಿ, ರಾಜು ಸಿಂದಬಂದಗಿ, ಮವಾಳಪ್ಪ ಹಣಮಂತರಾಯ, ಶರಣಪ್ಪ ಶಾಸ್ತ್ರೀ, ಸೈಯದ್‌ ಉಸ್ಮಾನ್‌, ಅಮ್ಜದ್‌ ಮುಲ್ಲಾ, ಇರ್ಫಾನ್‌ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)