`ಅಂಗವಿಕಲರಿಗೆ ಅನುಕಂಪ ಬೇಡ ಆತ್ಮ ಸ್ಥೈರ್ಯ ಬೇಕು'

7

`ಅಂಗವಿಕಲರಿಗೆ ಅನುಕಂಪ ಬೇಡ ಆತ್ಮ ಸ್ಥೈರ್ಯ ಬೇಕು'

Published:
Updated:

ಹೊಸಪೇಟೆ : `ಅಂಗವಿಕಲರಿಗೆ ಅನುಕಂಪದ ಬದಲು ಆತ್ಮ ಸ್ಥೈರ್ಯಬೇಕಾಗಿದೆ. ಸಮಾಜದ ಪ್ರತಿಯೊಬ್ಬರೂ ಈ ಕೆಲಸ ಮಾಡಬೇಕಾಗಿದೆ' ಉಪವಿಭಾಗಾಧಿಕಾರಿ ಡಾ. ಡಿ. ಆರ್. ಅಶೋಕ್ ಹೇಳಿದರು.ಇತ್ತೀಚೆಗೆ ನಗರಸಭೆಯ ಎಂ.ಪಿ.ಪ್ರಕಾಶ ಕಲಾಮಂದಿರದಲ್ಲಿ ಸ್ಥಳೀಯ ವಿಕಲಚೇತನರ ಸಂಘಗಳು ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಅಂಗವಿಕಲ  ಪಾಲಕರ 3ನೇ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿ “ಅಂಗವೈಕಲ್ಯ ದೇಹಕ್ಕೆ ಸಂಬಂಧಿಸಿದ್ದು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವುದು, ನಮ್ಮ ಮನೋಬಲಕ್ಕೆ ಸಂಬಂಧಿಸಿದ್ದು ಹಾಗೂ ಆತ್ಮಸ್ಥೈರ್ಯದಿಂದ ಮಾತ್ರ ಅಂಗವಿಕಲತೆಯನ್ನು ಅಳಿಸಲು ಸಾಧ್ಯ. ಈ ಹಿನ್ನೆಲೆ ಯಲ್ಲಿ  ಇಂತಹ ಕಾರ್ಯ ನಡೆಯ ಬೇಕಾಗಿದೆ' ಎಂದರು.ನಗರಸಭೆ ಅಧ್ಯಕ್ಷ ಎಂ.ಅಮ್ಜದ್ ಮಾತನಾಡಿ `ನಗರಸಭೆಗೆ ಮಂಜೂರಾಗುವ  ಯೋಜನೆಗಳ  ಹಣದಲ್ಲಿ ಶೇ 3ರಷ್ಟು ಹಣವನ್ನು ಮೀಸಲಿಟ್ಟು, ಕಳೆದ  3 ವರ್ಷದಿಂದ  ಅಂಗವಿಕಲರಿಗೆ ಪರಿಕ ಗಳನ್ನು ವಿತರಿಸಲಾಗುತ್ತಿದೆ  ' ಎಂದರು.

ಪೌರಾಯುಕ್ತ ಕೆ. ರಂಗಸ್ವಾಮಿ ಮಾತನಾಡಿ, ಸಂಘಟನೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಇಂತಹ ಕಾರ್ಯಕ್ಕೆ ಸ್ಥಳೀಯ ಅಂಗವಿಕಲರ ಘಟಕ ಸದಾ ಮುಂದಿರುವುದು ಶ್ಲಾಘನೀಯ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಮಹ್ಮದ್ ನಾಜೀಮುದ್ದಿನ್, ಪತ್ರಕರ್ತ ಕೆ. ಲಕ್ಷ್ಮಣ, ನಗರ ಸಭಾ ಸದಸ್ಯ  ಎಚ್.ಎನ್. ಎಫ್. ಇಮಾಮ್ ನಿಯಾಜಿ ಮಾತನಾಡಿದರು.ಕರವೇ ರಾಜ್ಯ ಸಂಘಟನೆ ಕಾರ್ಯದರ್ಶಿ ಗುಜ್ಜಲ ನಾಗರಾಜ, ಕನ್ನಡ ಸೇನೆಯ ಜೆ.ವಂಸತ್, ನಗರಸಭೆ ಸದಸ್ಯ ಸೋಮಪ್ಪ ಎನ್.ಡಿ. ಹುಲಿ ಗೆಮ್ಮ, ಎನ್.ವೆಂಕಟೇಶ್, ಅಧ್ಯಕ್ಷ ಮುಕ್ಕಣ್ಣ, ಉಪಾಧ್ಯಕ್ಷ  ಜೆ.ಅಂಜಿನಿ, ಾಜ ಶೇಖರ್, ನಾಗರಾಜ, ಗಾಳೆಪ್ಪ,  ಹನುಮಂತ, ವಿಶ್ವನಾಥ, ಭರ‌್ಮಣ್ಣ, ಮೈಮುನ್ನೀಸಾ  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry