ಅಂಗವಿಕಲರ ಅನುದಾನ ಬಳಕೆ: ಆಕ್ರೋಶ

7

ಅಂಗವಿಕಲರ ಅನುದಾನ ಬಳಕೆ: ಆಕ್ರೋಶ

Published:
Updated:

ಚಿಕ್ಕನಾಯಕನಹಳ್ಳಿ: ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ಮೀಸಲಿಟ್ಟಿ­ರುವ ಶೇ 3ರ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲ ಸಂಘದ ಅಧ್ಯಕ್ಷ ನರಸೇಗೌಡ ಆರೋಪಿಸಿದರು.ಪಟ್ಟಣದ ಸತ್ಯ ಸಾಯಿ ಸೇವಾ ಮಂದಿರದಲ್ಲಿ ಶುಕ್ರವಾರ ಅಸ್ತಿತ್ವಕ್ಕೆ ಬಂದ ನವಚೈತನ್ಯ ಅಂಗವಿಕಲರ ತಾಲ್ಲೂಕು ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಗವಿಕಲರಿಗೆ ಇದೇ ರೀತಿ ಅನ್ಯಾಯ ಮುಂದುವರೆದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಪುರಸಭಾ ಸದಸ್ಯೆ ಪ್ರೇಮಾ ಒಕ್ಕೂಟ ಉದ್ಘಾಟಿಸದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿ­ದರು. ಪುರಸಭೆ ಉಪಾಧ್ಯಕ್ಷೆ ಎಂ.ಡಿ.­ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ರೇಣುಕಮ್ಮ, ಪರಿಸರ ಎಂಜಿನಿ­ಯರ್ ಚಂದ್ರಶೇಖರ್, ತಿಪಟೂರು ಘಟಕದ ಅಧ್ಯಕ್ಷ ಉಮಾಪತಿ, ಚಿಕ್ಕನಾಯಕನಹಳ್ಳಿ ಘಟಕದ ಅಧ್ಯಕ್ಷ ಸುರೇಶ್‌ಕುಮಾರ್, ನಿಂಗರಾಜು, ಶಾಂತಮ್ಮ  ಇದ್ದರು.ಇಂದು ಬಿಇಡಿ ಅಂತಿಮ

ಆಯ್ಕೆ ಪಟ್ಟಿ ಪ್ರಕಟ


ತುಮಕೂರು: ಪ್ರಸಕ್ತ ಸಾಲಿನ ಬಿ.ಇಡಿ ಕೋರ್ಸ್‌ಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಜ. 4ರಂದು ಪ್ರಕಟಿಸಲಾಗುವುದು. ಹಂಚಿಕೆಯಾದ ಸಂಸ್ಥೆಗೆ ಒಪ್ಪಿಗೆಯಾದ ಅಭ್ಯರ್ಥಿಗಳು ವ್ಯವಸ್ಥಾಪಕ ಕೇಂದ್ರದಲ್ಲಿ ತಮ್ಮ ಮೂಲ ದಾಖಲೆಗಳನ್ನು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ಪರಿಶೀಲನೆಗೆ ಸಲ್ಲಿಸಬೇಕು. ದಾಖಲಾತಿ ಪಡೆಯಲು ಜ.10 ಕೊನೆಯ ದಿನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry