ಬುಧವಾರ, ಜನವರಿ 29, 2020
24 °C
ವಿಶ್ವ ಅಂಗವಿಕಲರ ದಿನಾಚರಣೆ ಇಂದು

ಅಂಗವಿಕಲರ ಕಚೇರಿಗೇಅಂಗವೈಕಲ್ಯ

ಪ್ರಜಾವಾಣಿ ವಾರ್ತೆ/ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಅಂಗವಿಕಲರ ಕಚೇರಿಗೇಅಂಗವೈಕಲ್ಯ

ಗುಲ್ಬರ್ಗ: ಅಂಗವಿಕಲರ ಸಮಸ್ಯೆಗಳಿಗೆ ‘ಕಿವಿ’ಯಾಗಬೇಕಿದ್ದ ಇಲಾಖೆ ತಾನೇ ಅಂಗವೈಕಲ್ಯದಿಂದ ಬಳಲುತ್ತಿದೆ. ಅಷ್ಟೇ ಅಲ್ಲ, ದೂರು ಹೇಳಲು ಬರುವ ಅಂಗವಿಕಲರಿಗೆ ಕುಳಿ ತುಕೊಳ್ಳಲು ಆಸನ ವ್ಯವಸ್ಥೆಯೂ ಇಲ್ಲಿ ಹೀಗಾಗಿ ಅಂಗವಿಕಲರು ಬವಣೆ ಪಡುವಂತಾಗಿದೆ.ಜಿಲ್ಲೆಯಲ್ಲಿ ಅಂಗವಿಕಲರ ಇಲಾಖೆ ಆರಂಭ ವಾದ ದಿನದಿಂದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಮುಂಭಾಗದಲ್ಲಿರುವ ‘ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆ’ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲಾಖೆಗೆ ಎರಡು ಕೊಠಡಿಗಳನ್ನು ನೀಡಲಾಗಿದ್ದು, ಅಷ್ಟರಲ್ಲೇ ಇಡೀ ಜಿಲ್ಲೆಯ ಅಂಗವಿಕಲರ ಸಮಸ್ಯೆಗಳಿಗೆ ಇಲಾಖೆ ದನಿಯಾಗಬೇಕಾಗಿದೆ.‘ಅಂಗವಿಕಲರ ಕಲ್ಯಾಣ ಇಲಾಖೆ’ಯನ್ನು ಬದಲಾವಣೆ ಮಾಡ ಲಾಗಿದ್ದು, ಇದೀಗ ‘ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ’ ಎಂದು ಮರುನಾಮಕ ರಣ ಮಾಡಲಾಗಿದೆ. ಆದರೆ, ಅಂಗವಿಕಲರ ‘ಕಲ್ಯಾಣ’ವೂ ಆಗಿಲ್ಲ; ‘ಸಬಲೀಕರಣ’ವೂ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಎಷ್ಟು ಮಂದಿ ಅಂಗವಿಕಲರು?: ದೈಹಿಕ ನ್ಯೂನತೆ, ಅಂಧರು, ಮಂದ ದೃಷ್ಟಿ, ಶ್ರವಣದೋಷ, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು, ಕುಷ್ಠರೋಗಿಗಳು ಸೇರಿದಂತೆ ಜಿಲ್ಲೆಯಲ್ಲಿ 40,896 ಮಂದಿ ಅಂಗವಿಕಲರು ಇದ್ದಾರೆ. ಇವರೆಲ್ಲರೂ ಒಂದಿಲ್ಲೊಂದು ಕಾರಣ ಕ್ಕಾಗಿ ಈ ಫಲಾನುಭವಿಗಳು ಇಲಾಖೆಗೆ ಭೇಟಿ ನೀಡಲೇಬೇಕು. ಆದರೆ, ‘ಅಂಧರ ಪಾಲಿನ ಆಶಾಕಿರಣ’ವಾಗಬೇಕಿದ್ದ ಇಲಾಖೆ ಮಾತ್ರ ಅಂಗವಿಕಲರಿಂದ ದೂರ ಉಳಿದಿದೆ.ವಾಹನ ವ್ಯವಸ್ಥೆ ಇಲ್ಲ: ಈಗಿರುವ ಕಚೇರಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಹೋಗಲು ಯಾವುದೇ ಬಸ್ ಸೌಕರ್ಯವಿಲ್ಲ. ಆಟೊಗಳೂ ಈ ಭಾಗದಲ್ಲಿ ಸಂಚರಿಸುವುದಿಲ್ಲ. ನಡೆದುಕೊಂಡೇ ಕಚೇರಿ ತಲುಪಬೇಕು, ಇಲ್ಲವೇ ದುಬಾರಿ ಬಾಡಿಗೆ ಕೊಟ್ಟು ಆಟೊದಲ್ಲಿ ಪಯಣಿಸಬೇಕು. ಹಾಗೊಂದು ವೇಳೆ ಆಟೊ ದಲ್ಲಿ ಹೋದ ಬಳಿಕ ಕಚೇರಿಯಲ್ಲಿ ಸಂಬಂಧಿ ಸಿದ ಅಧಿಕಾರಿ ಇಲ್ಲದಿದ್ದರೆ ಮತ್ತೆ ಮಾರನೇ ದಿನ ಹೋಗಲೇಬೇಕಾದ ಅನಿವಾರ್ಯತೆ ಇದೆ.ಒಬ್ಬರಿಗೆ ಮೂರು ಜಿಲ್ಲೆ: ‘ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಜಿಲ್ಲಾ ಅಧಿಕಾರಿಗೆ ಮೂರು ಜಿಲ್ಲೆಗಳ ಕಾರ್ಯ ಭಾರ ಹಂಚಿಕೆ ಮಾಡಲಾಗಿದೆ. ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಬ್ಬರೇ ಕಾರ್ಯ ನಿರ್ವಹಿಸಬೇಕಾದ್ದರಿಂದ ಅವರು ಹೆಚ್ಚಾಗಿ ಸ್ಥಾನಿಕ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಕಾಯಂ ಅಧಿಕಾರಿಯನ್ನು ನೇಮಕ ಮಾಡಿದರೆ ಅಂಗವಿಕಲರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲವಾದಲ್ಲಿ ಕೈಯಿಂದ ಹಣ ಖರ್ಚು ಮಾಡಿಕೊಂಡು  ಅಲೆಯಬೇಕಾ ಗುತ್ತದೆ’ ಎಂದು ದೈಹಿಕ ನ್ಯೂನತೆ ಇರುವ ಶಿವಶರಣಪ್ಪ ಆರೋಪಿಸುತ್ತಾರೆ.ಹಲವು ಪ್ರತಿಭಟನೆ: ಅಂಗವಿಕಲರ ಕಚೇರಿ ಯನ್ನು ವಾಹನ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಸ್ಥಾಪಿಸಲಾಗಿದೆ ಎಂದು ಆರೋಪಿಸಿ ಅಂಗವಿ ಕಲರು ಅನೇಕ ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈಗಿರುವ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಹೋರಾಟ ಮಾಡು ತ್ತಲೇ ಬಂದಿದ್ದಾರೆ. ಆದಾಗ್ಯೂ, ಸಮಸ್ಯೆ ಸಮಸ್ಯೆ ಉಳಿದಿದೆ. ದೂರವಿರುವ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಹೋರಾಟಕ್ಕೆ ಇದುವರೆಗೂ ಜಯ ಸಿಕ್ಕಿಲ್ಲ.ಶುಲ್ಕ ಮರುಪಾವತಿ

ಪಿಯು ಮೇಲ್ವಟ್ಟ ಅಂಗವಿಕಲವಿದ್ಯಾರ್ಥಿ ಗಳ ಪ್ರವೇಶ ಶುಲ್ಕವನ್ನು ಮರು ಪಾವತಿ ಮಾಡಲಾಗುತ್ತದೆ. ಅಂಗವಿಕಲ ಯುವಕ/ ಯುವತಿಯನ್ನು ಮದುವೆ ಆದಲ್ಲಿ ₨ 50 ಸಾವಿರ ಸಹಾಯಧನ ನೀಡ ಲಾಗುತ್ತದೆ. ಇಬ್ಬರೂ ಅಂಗವಿಕಲರು ಇದ್ದಲ್ಲಿ ಈ ಯೋಜನೆಯ ಲಾಭ ದೊರಕು ವುದಿಲ್ಲ. ಇಬ್ಬರಲ್ಲಿ ಒಬ್ಬರು ಮಾತ್ರ ಅಂಗವಿಕಲರು ಇರಬೇಕು. ಅಂಧ ಮಹಿಳೆಗೆ ಹೆರಿಗೆಯಾದ ಬಳಿಕ ಪ್ರತಿ ತಿಂಗಳು ₨ 2,000ಗಳನ್ನು 2 ವರ್ಷಗಳ ವರೆಗೆ ನೀಡಲಾಗುತ್ತದೆ.‘ಕಚೇರಿ ಸ್ಥಳಾಂತರ ಪರಿಶೀಲನೆ’

ಅಂಗವಿಕಲರ ಕಚೇರಿ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸಲಾಗುವುದು. ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲು 2 ಅಥವಾ 3 ಕೊಠಡಿ ಬೇಕಾಗುತ್ತವೆ. ಈ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಮಾಸಾಶನ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಕೆಲವರ ಮಾಸಾಶನ ತಡೆಹಿಡಿಯಲಾಗಿತ್ತು. ಇದೀಗ, ಪರಿಶೀಲನೆ ನಡೆಸಿ, ಮತ್ತೆ ಮಾಸಾಶನ ನೀಡಲಾಗುತ್ತಿದೆ. ಅಂಗವಿಕಲರ ಸಮಸ್ಯೆಗಳನ್ನು ಆಲಿಸಲು ಜಿಲ್ಲೆಯ 220 ಗ್ರಾಮ ಪಂಚಾಯಿತಿ ಹಾಗೂ 7 ತಾಲ್ಲೂಕುಗಳಲ್ಲಿ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ಕ್ರಮವಾಗಿ ಮಾಸಿಕ ₨ 1,500 ಹಾಗೂ ₨ 4,000 ಗೌರವ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಾಗಿದ್ದು, ಸವಲತ್ತುಗಳನ್ನು ತಲುಪಿಸಲು ಕಷ್ಟಸಾಧ್ಯವಾಗುತ್ತಿದೆ. ಆದಾಗ್ಯೂ, ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.

–ಬಿ.ಆರ್.ಪವಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಜಿಲ್ಲಾ ಅಧಿಕಾರಿ

ಪ್ರತಿಕ್ರಿಯಿಸಿ (+)