ಗುರುವಾರ , ಫೆಬ್ರವರಿ 25, 2021
17 °C

ಅಂಗವಿಕಲರ ಕ್ರಿಕೆಟ್‌: ಭಾರತ ಇತರೆ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲರ ಕ್ರಿಕೆಟ್‌: ಭಾರತ ಇತರೆ ತಂಡಕ್ಕೆ ಜಯ

ಹುಬ್ಬಳ್ಳಿ: ಗುರುವಾರವಷ್ಟೇ ‘ಡೆನಿಸನ್ಸ್‌ ಕಪ್‌’ ಎತ್ತಿಹಿಡಿದು ಬೀಗುತ್ತಿದ್ದ ಪಶ್ಚಿಮ ಬಂಗಾಳ ತಂಡ ಶುಕ್ರವಾರ ನಿರಾಸೆ ಅನುಭವಿಸಿತು. ಚಾಂಪಿಯನ್ನರಿಗೆ ಆಘಾತ ನೀಡಿದ ಭಾರತ ಇತರೆ ತಂಡದ ಆಟಗಾರರು 2 ವಿಕೆಟ್‌ ಅಂತರದಿಂದ ರೋಚಕ ಗೆಲುವು ಸಾಧಿಸಿದರು.ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ  26ನೇ ರಾಷ್ಟ್ರೀಯ ಅಂಗವಿಕಲರ  ಕ್ರಿಕೆಟ್‌ ಟೂರ್ನಿಯ ವಿಜೇತ ಪಶ್ಚಿಮ ಬಂಗಾಳ ಹಾಗೂ ಭಾರತ ಇತರೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಮೊದಲು ಬ್ಯಾಟಿಂಗ್‌ ಮಾಡಿತು. ಬಂಗಾಳದ ಪರ ಬಬ್ಬನ್‌ ಸಿಂಗ್‌ (34) ಉತ್ತಮ ಆಟ ಪ್ರದರ್ಶಿಸಿದರು, ಅಂತಿಮವಾಗಿ ತಂಡ ನಿಗದಿತ 12 ಓವರುಗಳಲ್ಲಿ 80 ರನ್‌ ಕಲೆಹಾಕಿತು.ಗುರಿಯ ಬೆನ್ನುಹತ್ತಿದ ಭಾರತ ಇತರೆ ಪರ ರೋಸಿ ರೆಡ್ಡಿ ಕಡೆಯ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ಬಂಗಾಳ: 12 ಓವರುಗಳಲ್ಲಿ 5 ವಿಕೆಟ್‌ಗೆ 80 (ಬಬ್ಬನ್‌ ಸಿಂಗ್ ಔಟಾಗದೇ 34, ಅಬ್ದುಲ್‌ ಖಾಲಿಕ್‌ 11. ಆಂಜಿ ನಾಯ್ದು 15ಕ್ಕೆ 3).

ಶೇಷ ಭಾರತ: 11.5 ಓವರುಗಳಲ್ಲಿ 8 ವಿಕೆಟ್‌ಗೆ 83 (ರೋಸಿ ರೆಡ್ಡಿ ಔಟಾಗದೇ 27, ಪ್ರದೀಪ್ ಭಾದೊರಿಯಾ 11, ಅಸಿತ್ ಜೈಸ್ವರ್‌ 16. ಬಬ್ಬನ್‌ ಸಿಂಗ್‌        16ಕ್ಕೆ 2)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.