ಸೋಮವಾರ, ಅಕ್ಟೋಬರ್ 21, 2019
23 °C

ಅಂಗವಿಕಲರ ಕ್ರೀಡಾಕೂಟಕ್ಕೆ ಚಾಲನೆ

Published:
Updated:

ಪೀಣ್ಯ ದಾಸರಹಳ್ಳಿ: ಬೆಂಗಳೂರಿನ ಮಲೆನಾಡು ಮಿತ್ರ ವೃಂದವು ಎಚ್‌ಎಂಟಿ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ `ಕ್ರೀಡಾಕೂಟ-2012~ಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಅಂಗವಿಕಲ ಕ್ರೀಡಾ ಆಟಗಾರ ಬಿ.ಜಿ.ಸಂದೇಶ್ ಬಪ್ಪುಂಜಿ ಚಾಲನೆ ನೀಡಿದರು.ವಯಸ್ಸಿನ ಭೇದ-ಭಾವವಿಲ್ಲದೆ ಎಲ್ಲ ಕಿರಿಯರು ಹಾಗೂ ಹಿರಿಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟವು ಸಮಾಜ ಬಾಂಧವರು ಒಂದೆಡೆ ಸೇರಲು ಅವಕಾಶ ಕಲ್ಪಿಸಿತ್ತು.ಅದೃಷ್ಟ ದಂಪತಿಗಳು, ಸರ್ಚಿಂಗ್ ದಿ ಚಾಕೋಲೇಟ್, ಮಡಕೆ ಒಡೆಯುವುದು, ಕಾಯಿಗೆ ಕಲ್ಲು ಹೊಡೆಯುವುದು, ವೇಗದ ನಡಿಗೆ ಮತ್ತಿತರ ಕ್ರೀಡೆಗಳಲ್ಲಿ ಅನೇಕರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸುಬ್ಬಯ್ಯ ನಂಟೂರು, ಕಾರ್ಯದರ್ಶಿ ವಾಸಪ್ಪ ಪಡುಬೈಲ್ ಇತರರು ಹಾಜರಿದ್ದರು.

 

Post Comments (+)