ಅಂಗವಿಕಲರ ಬಸ್ ಪಾಸ್ ನವೀಕರಣ

7

ಅಂಗವಿಕಲರ ಬಸ್ ಪಾಸ್ ನವೀಕರಣ

Published:
Updated:

ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2014ನೇ ಸಾಲಿಗೆ ಅಂಗವಿಕಲರಿಗೆ ರಿಯಾಯಿತಿ ದರದ ಬಸ್ ಪಾಸ್‌ ಅನ್ನು ನವೀಕರಿ­ಸಲು ಫೆಬ್ರುವರಿ 28 ವರೆಗೆ ಅವಕಾಶ ಕಲ್ಪಿಸಲಾಗಿದೆ. 2013ರಲ್ಲಿ ಪಡೆದ ಪಾಸುಗಳನ್ನು ನವೀಕರಿಸಿಕೊಳ್ಳುವ ಕೊನೆಯ ದಿನ ಫೆಬ್ರವರಿ 28ರ ವರೆಗೂ ಬಳಸಲು ಅವಕಾಶ ನೀಡಲಾಗಿದೆ ಎಂದು ವಿಭಾ­ಗೀಯ ನಿಯಂತ್ರಣಾಧಿಕಾರಿ ತಿಳಿಸಿ­ದ್ದಾರೆ.ಪ್ರತಿ ತಾಲ್ಲೂಕಿನ ಹತ್ತಿರದ ಬಸ್ ಘಟಕ­ಗಳಲ್ಲಿ ನವೀಕರಣದ ಶುಲ್ಕ ₨ 660 ಮತ್ತು ಹಳೆಯ ಪಾಸ್‌ ಅನ್ನು ಹಿಂದಿರುಗಿಸಿ ಉದ್ಯೋಗದ ವಿವರ ಮತ್ತು ಇತ್ತೀಚಿನ ಎರಡು ಭಾವಚಿತ್ರ­ ನೀಡಿ ಪಾಸ್‌ ನವೀಕರಿಸಿ­ಕೊಳ್ಳ­ಬಹು­ದು. ಹೊಸದಾಗಿ 2014ನೇ ಸಾಲಿಗೆ ಅಂಗವಿಕಲರು ರಿಯಾಯಿತಿ ದರದ ಬಸ್ ಪಾಸ್ ಪಡೆದುಕೊಳ್ಳಲು ಅಂಗ­ವಿಕ­ಲರ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ­ರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ, ರಹವಾಸಿ ಪ್ರಮಾಣ ಪತ್ರ, ಇತ್ತೀ­ಚಿನ 3 ಭಾವಚಿತ್ರಗಳು, ಪಾಸ್ ಶುಲ್ಕ ₨ 660 ಅನ್ನು ಪ್ರತಿ ಶುಕ್ರವಾರ ಮತ್ತು ಮಂಗಳವಾರ­ ಸಂಸ್ಥೆಯ ವಿಭಾ­ಗೀಯ ಕಚೇರಿ, ನವನಗರ, ಬಾಗಲಕೋಟೆ­ಯಲ್ಲಿ ಸಲ್ಲಿಸಿ ಪಡೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry