ಅಂಗವಿಕಲರ ರಾಷ್ಟ್ರೀಯ ವಾಲಿಬಾಲ್: ಫೈನಲ್‌ಗೆ ಕರ್ನಾಟಕ

7

ಅಂಗವಿಕಲರ ರಾಷ್ಟ್ರೀಯ ವಾಲಿಬಾಲ್: ಫೈನಲ್‌ಗೆ ಕರ್ನಾಟಕ

Published:
Updated:

ಬೆಳಗಾವಿ: ಕರ್ನಾಟಕ ಹಾಗೂ ಆಂಧ್ರಪ್ರದೇಶ ತಂಡಗಳು ನಗರದ ಸಿಪಿಇಡಿ ಮೈದಾನದಲ್ಲಿ ಭಾರತೀಯ ಪ್ಯಾರಾಲಿಂಪಿಕ್ ವಾಲಿಬಾಲ್ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಅಂಗವಿಕಲರ ರಾಷ್ಟ್ರೀಯ ಸ್ಟ್ಯಾಂಡಿಂಗ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದವು.ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ 25-9, 25-10 ಪಾಯಿಂಟ್‌ಗಳಿಂದ  ಗೋವಾ ತಂಡವನ್ನು ಸೋಲಿಸಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಹರಿಯಾಣವನ್ನು 22-25, 16-25 ಪಾಯಿಂಟ್‌ಗಳಿಂದ ಆಂಧ್ರಪ್ರದೇಶ ತಂಡ ಮಣಿಸಿತು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹರಿಯಾಣ ತಂಡ 2-0 ಸೆಟ್‌ಗಳಿಂದ (25-10, 18-25) ಗೋವಾ ತಂಡವನ್ನು ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry