ಶುಕ್ರವಾರ, ಮೇ 14, 2021
35 °C

ಅಂಗವಿಕಲೆಗೆ ಇಲ್ಲ ಮಾಸಾಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗವಿಕಲೆಗೆ ಇಲ್ಲ ಮಾಸಾಶನ!

ಕಾಳಗಿ: ನಿಂತುಕೊಳ್ಳಲು ಉಸಿರಿಲ್ಲದ ಕಾಲುಗಳು. ನೋಡಲು ಬೇಕಾಬಿಟ್ಟಿಯ ಕಣ್ಣುಗಳು. ಹೆಸರಿಗೆ ಇದ್ದಿರುವ ಕೈಗಳು. ಮಾತನಾಡಲು ಸರಿ ಹೊಳ್ಳದ ನಾಲಿಗೆ. ಹೀಗೆ ಇದ್ದು ಇಲ್ಲದ ಅಂಗಗಳು ತುಂಬಿದ ಶರೀರದಿಂದ ದಿನಗಳೆಯುತ್ತಿರುವ ಚಿತ್ತಾಪುರ ತಾಲ್ಲೂಕಿನ ಭರತನೂರ ಗ್ರಾಮದ 30ವರ್ಷದ ಅಂಗವಿಕಲತೆಯ ಅಕ್ಕನಾಗಮ್ಮಳಿಗೆ ಇನ್ನೂ ಮಾಸಾಶನ ಇಲ್ಲ ಎಂದರೆ ಎಂಥವರು ಆಶ್ಚರ್ಯ ಪಡುವಂಥ ವಿಷಯವೇ ಸರಿ.ಹುಟ್ಟಿದ ಐದು ತಿಂಗಳಿಗೆ ಶಕ್ತಿಹೀನಳಾದ ಅಕ್ಕನಾಗಮ್ಮಳನ್ನು ದೂರದ ಎಷ್ಟೇ ಆಸ್ಪತ್ರೆಗಳಿಗೆ ಕೊಂಡೊಯ್ದು ತೋರಿಸಿದರೂ ಗುಣಮುಖ ಹೊಂದದೆ ತಾಯಿ ಗೌರಮ್ಮಳ ಗರಡಿಯಲ್ಲಿ ದಿನ ಹಾಕುತ್ತಿರುವ ಇವಳಿಗೆ 2009ರ ಸೆಪ್ಟೆಂಬರ್ 15ರಂದು ಅಂಗವಿಕಲ ಮಾಸಾಶನ ಮಂಜೂರಾಗಿದೆ.

 

(ಕಡತ ಸಂಖ್ಯೆ: ಸಂ/ಕಂ/ಅಂ.ವಿ/228/2009-10) ಬಡತನದ ಬೇಗುದಿಯಲ್ಲಿ ಜೀವನ ಸಾಗಿಸುವ ಗೌರಮ್ಮ, ತನ್ನ ಮಗಳ ಮಾಸಾಶನದ ಹಣ ಇಂದು ಬರಬಹುದು. ನಾಳೆಯಾದರೂ ಬರಬಹುದು ಎಂದುಕೊಂಡು ಇಂದು, ನಾಳೆ ಎರಡೂ ಮರೆತುಬಿಟ್ಟಿದ್ದಾಳೆ.ಅದೇಷ್ಟೋ ಜನ ಹೆಸರಿಗೆ ಮಾತ್ರ ಅಂಗವಿಕಲರಾಗಿ ಪ್ರತಿ ತಿಂಗಳು ತಪ್ಪದೇ ಮಾಸಾಶನ ಪಡೆಯುತ್ತಿರುವ ಈ ಸಂದರ್ಭದಲ್ಲಿ ದೇಹದ ಪ್ರತಿ ಅಂಗಗಳ ಸಂಪೂರ್ಣ ಶಕ್ತಿ ಕಳಚಿಕೊಂಡ ನನಗೆ ಮಾಸಾಶನ ಮಂಜೂರಿ ಆದೇಶ ಹೊರಬಿದ್ದು ಎರಡು ವರ್ಷ ಉರುಳಿದರೂ ಒಂದು ಪೈಸೆಯೂ ಸರ್ಕಾರದಿಂದ ಬಂದಿಲ್ಲ ಎಂಬ ದುಃಖ ಅಕ್ಕನಾಗಮ್ಮಳ ಕಣ್ಣುಗಳಿಂದ ಹೊರಚಿಮ್ಮುತ್ತಿದೆ.ಮಾಸಾಶನ ಮಂಜೂರಾದ ಆದೇಶ ಪತ್ರ ಮತ್ತು ಗುರುತಿನ ಚೀಟಿ ಕೈಯಲ್ಲಿ ಹಿಡಿದು ಕಾಳಗಿ ವಿಶೇಷ ತಹಸೀಲ್ದಾರರ ಕಚೇರಿಗೆ ಅಲೆದಾಡಿ ಸುಸ್ತಾದರೆ 2009ರ ಅಕ್ಟೋಬರ್ 14ರಂದು ಉಪಖಜಾನೆ ಅಧಿಕಾರಿಗಳ ಕಚೇರಿಗೆ ಮಂಜೂರಾತಿ ಮಾಹಿತಿ ರವಾನಿಸಲಾಗಿದೆ ಎಂಬ ಉತ್ತರ ಕೇಳಿ ಬಂದಿದೆ ಎನ್ನುತ್ತಾರೆ ಸಂಬಂಧಿ ಸಿದ್ರಾಮ ಧುತ್ತರಗಿ ಅವರು.ಇಷ್ಟಕ್ಕೂ ಬಿಡದೆ ಉಪಖಜಾನೆ ಕಚೇರಿಗೆ ತೆರಳಿ ವಿಚಾರಿಸಿದರೆ, 2009ರ ಫೆಬ್ರುವರಿ ತಿಂಗಳಿಂದ ನೆಮ್ಮದಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೇ ಜಾರಿಗೆ ಬಂದಿದೆ. ಆ ಮೂಲಕವೇ ಮಾಸಾಶನ ಹಣ ಬಿಡುಗಡೆಯಾಗಿದೆ. ನಂತರದ ಕೈಬರಹ ಆದೇಶಗಳಿಗೆ ಮಾನ್ಯತೆ ನೀಡದೆ ಹಿಂದಕ್ಕೆ ಕಳುಹಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.ಈ ಮಧ್ಯೆ ಮಾಸಾಶನ ವಂಚಿತಳಾದ ಅಂಗವಿಕಲೆ ಅಕ್ಕನಾಗಮ್ಮಳಿಗೆ ಬೇರೆ ರೀತಿಯ ಸಹಾಯವಾದರು ಯಾರೊಬ್ಬರೂ ಕಲ್ಪಿಸಿ ಕೊಡದಿರುವುದು ವಿಪರ್ಯಾಸದ ಸಂಗತಿಯಾಗಿ ಸರ್ಕಾರದ ಸೌಲಭ್ಯದಿಂದ ದೂರ ಉಳಿಯುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಂಗವಿಕಲರ ಕಲ್ಯಾಣ ಇಲಾಖೆ ಈಕಡೆ ಕಣ್ಣು ಹಾಯಿಸಿ ಅಕ್ಕನಾಗಮ್ಮಳ ನೆರವಿಗೆ ಮುಂದಾಗಬೇಕಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.