`ಅಂಗವಿಕಲ ಮಕ್ಕಳ ಅಭಿವೃದ್ಧಿಗೆ ರೂ 10 ಲಕ್ಷ'

ಬುಧವಾರ, ಜೂಲೈ 17, 2019
25 °C

`ಅಂಗವಿಕಲ ಮಕ್ಕಳ ಅಭಿವೃದ್ಧಿಗೆ ರೂ 10 ಲಕ್ಷ'

Published:
Updated:

ಚನ್ನಗಿರಿ: ಅಂಗವಿಕಲರ ಕಲ್ಯಾಣಕ್ಕಾಗಿ ರೂ 10 ಲಕ್ಷ ಅನುದಾನವನ್ನು ನೀಡುವುದಾಗಿ ಶಾಸಕ ವಡ್ನಾಳ್ ರಾಜಣ್ಣ ಹೇಳಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಈಚೆಗೆ ನಡೆದ ಅಂಗವಿಕಲ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಅಂಗವಿಕಲ ಮಕ್ಕಳ ಕೆಲಸವನ್ನು ದೇವರ ಕೆಲಸ ಎಂದು ತಿಳಿದುಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.ಹುಬ್ಬಳ್ಳಿ ಮನೋವಿಕಸನ ಕೇಂದ್ರದ ತಜ್ಞ ವೈದ್ಯ ಡಾ. ಹಿರೇಮಠ ಮಾತನಾಡಿ ವಿಕಲಚೇತನ ಮಕ್ಕಳ ಬಾಳಲ್ಲಿ ಬೆಳಕು ತುರುವಂತಹ ಕಾರ್ಯವನ್ನು ನಾವೆಲ್ಲಾ ಮಾಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಸಹಯೋಗದೊಡನೆ ಶೇ. 50ರಷ್ಟು ಸಹಾಯಧನವನ್ನು ಸ್ವಯಂ ಸೇವಾ ಸಂಸ್ಥೆಗಳು ನೀಡುತ್ತಿವೆ ಎಂದರು.ಜಿಲ್ಲಾ ಅಂಗವಿಕಲ ಮಕ್ಕಳ ಸಬಲೀಕರಣ ಅಧಿಕಾರಿ ಶಶಿಧರ್, ಡಾ.ಮಂಜುನಾಥ್, ಡಾ. ರಾಮಚಂದ್ರ ರೆಡ್ಡಿ, ಸಮನ್ವಯಾಧಿಕಾರಿ ರಾಜೀವ್, ತಾಲ್ಲೂಕು ವಿಕಲಚೇತನ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್. ತಿಪ್ಪೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಪ್ರಾರ್ಥಿಸಿದರು. ಪಿ.ಸಿ. ದೇವೇಂದ್ರಪ್ಪ ಸ್ವಾಗತಿಸಿದರು. ಶಂಕರಗೌಡ ವಂದಿಸಿದರು.ಅರ್ಜಿ ಆಹ್ವಾನ

ದಾವಣಗೆರೆ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯ) 2013-14ನೇ ಸಾಲಿಗೆ ಪ್ರಧಾನ ಮಂತ್ರಿ `ಉದ್ಯೋಗ ಸೃಜನ' ಜಾರಿಗೊಳಿಸಿದ್ದು, ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸ್ವೀಕರಿಸಲು ಜುಲೈ 15 ಕಡೆಯ ದಿನ. ಆಸಕ್ತರು, ದೂರವಾಣಿ: 232052, 232053 ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry