ಭಾನುವಾರ, ಏಪ್ರಿಲ್ 11, 2021
32 °C

ಅಂಗವಿಕಲ ಮಕ್ಕಳ ದಾಖಲು: 38 ಸಿದ್ಧತಾ ಕೇಂದ್ರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಸರ್ವ ಶಿಕ್ಷಣ ಅಭಿಯಾನದ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿ ಗೃಹಾಧಾರಿತ ಶಿಕ್ಷಣ ಕೇಂದ್ರದಲ್ಲಿ ಉಳಿದಿದ್ದ ಅಂಗವಿಕಲ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲು ಸರ್ಕಾರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಅದರಂತೆ ಜಿಲ್ಲೆಯಲ್ಲಿ ಗೃಹಾಧಾರಿತ ಶಿಕ್ಷಣ ಕೇಂದ್ರಗಳಲ್ಲಿ ಉಳಿದಿದ್ದ ಅಂಗವಿಕಲ ಮಕ್ಕಳಲ್ಲಿ ಸುಮಾರು 208 ಮಕ್ಕಳನ್ನು ಶಾಲಾಧರಿತ ಶಿಕ್ಷಣ ಕೇಂದ್ರಗಳಿಗೆ ದಾಖಲಿಸಲು ಯೋಜಿಸಲಾಗಿದ್ದು, ಶಾಲಾ ಸಿದ್ದತಾ ಕೇಂದ್ರಗಳನ್ನು ಕ್ಲಸ್ಟರ್ ಹಂತದ ಕೇಂದ್ರ ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಜಿಲ್ಲೆಯಲ್ಲಿ ಒಟ್ಟು 38 ಸಿದ್ದತಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ವಾರದಲ್ಲಿ ಎರಡು ದಿನಗಳು, ಅಂದರೆ ಸೋಮವಾರ ಮತ್ತು ಬುಧವಾರ ಶಾಲಾ ಕರ್ತವ್ಯದ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವೇಳೆ ಈ ದಿನಗಳು ಸಾರ್ವಜನಿಕ ರಜಾ ದಿನಗಳಾಗಿದ್ದಲ್ಲಿ ಮಾರನೆಯ ದಿನ ಕೆಲಸ ದಿನವಾಗಿರುತ್ತದೆ. ಮಕ್ಕಳು ಕೇಂದ್ರಕ್ಕೆ ಬಂದು ಹೋಗಲು ಒಂದು ತಿಂಗಳಿಗೆ ರೂ 300 ಪ್ರಯಾಣ ಭತ್ಯೆ ನೀಡಲಾಗುವುದು. ಪೋಷಕರು ಇದರ ಪ್ರಯೋಜನ ಪಡೆದು ತಮ್ಮ ಮಕ್ಕಳನ್ನು ಶಾಲಾ ಸಿದ್ಧತಾ ಕೇಂದ್ರಗಳಿಗೆ ಕರೆತರುವ ವ್ಯವಸ್ಥೆಯ ಬಗ್ಗೆ ಸ್ಥಳೀಯ ಎಸ್.ಆರ್.ಪಿ ಕೇಂದ್ರದ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ ಮಗುವನ್ನು ಶಾಲೆಗೆ ದಾಖಲಿಸಲು ಕೋರಿದೆ.ಮಾಹಿತಿಗಾಗಿ ಬ್ಲಾಕ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು (ಐ.ಇ.ಆರ್.ಟಿ) ಗಳನ್ನು ಅಥವಾ ಮೊಬೈಲ್ ಸಂಖ್ಯೆ ಚನ್ನಪಟ್ಟಣ 9844048967, ಕನಕಪುರ: 9449110629, ಮಾಗಡಿ 9035530037, ರಾಮನಗರ 9844807885 ರ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.