ಶನಿವಾರ, ಮೇ 15, 2021
25 °C

ಅಂಗವಿಕಲ ಮಗಳನ್ನು ಕೆರೆಗೆ ಎಸೆದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಐದು ವರ್ಷದ ಅಂಗವಿಕಲ ಮಗಳನ್ನು ತಾಯಿಯೇ ಕೆರೆಗೆ ಎಸೆದು ಕೊಂದಿರುವ ಘಟನೆ ತಾಲ್ಲೂಕಿನ ನೊಣವಿನಕೆರೆ ಸಮೀಪದ ಕೋಡಿಹಳ್ಳಿ ಬಳಿ ಸೋಮವಾರ ಸಂಜೆ ನಡೆದಿದೆ.

ತಾಲ್ಲೂಕಿನ ಕರಡಾಳು ಗ್ರಾಮದ ವಾಸಿ ಹೇಮಾವತಿ ಎಂಬುವರು ಮಗಳನ್ನು ಕೊಂದ ಆರೋಪಿ. ಇವರ ಮೊದಲು ಮಗಳು ಉಮಾ (5) ಮೃತ ದುರ್ದೈವಿ.ನೊಣವಿನಕೆರೆ ಸಮೀಪದ ಬೋಚಿಹಳ್ಳಿಯ ಮಹಾಲಿಂಗಯ್ಯ ಎಂಬುವರೊಂದಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಹೇಮಾವತಿ ನಾಲ್ಕು ವರ್ಷಗಳಿಂದ ಗಂಡನಿಂದ ಬೇರೆಯಾಗಿ ಕರಡಾಳಿನ ತಾಯಿ ಮನೆಯಲ್ಲಿ ವಾಸವಿದ್ದರು. ಆಕೆಗೆ ಬೇರೊಬ್ಬರ ಸಂಬಂಧದಿಂದ ಎರಡನೇ ಮಗಳು ಕುಸುಮಾ (2) ಜನಿಸಿದ್ದಳು.ಕಿತ್ತು ತಿನ್ನುವ ಬಡತನದ ನಡುವೆ ಮಕ್ಕಳನ್ನು ಸಾಕಲು ತಾಯಿ ಹೆಣಗುತ್ತಿದ್ದರು. ಸಾಲ ಮಾಡಿ ಅಂಗವಿಕಲ ಮಗಳಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದ್ದರಿಂದ ನೊಂದಿದ್ದರು.  ಸೋಮವಾರ ಸಂಜೆ ಇಬ್ಬರು ಮಕ್ಕಳೊಂದಿಗೆ ನೊಣವಿನಕೆರೆ ಸಮೀಪದ ಕೋಡಿಹಳ್ಳಿ ಕೋಡಿ ಬಳಿ ಬಂದು ಉಮಾಳನ್ನು ಮೊದಲು ಕೆರೆಗೆ ಎಸೆದಿದ್ದಾರೆ. ಕಿರಿಯ ಮಗಳೊಂದಿಗೆ ತಾನೂ ಕೆರೆಗೆ ಹಾರುವ ಹಂತದಲ್ಲಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ರಾಜು ಎಂಬುವರು ಅವರನ್ನು ರಕ್ಷಿಸಿದ್ದಾರೆ.ನೊಣವಿನಕೆರೆ ಪೊಲೀಸರು ಹೇಮಾವತಿಯನ್ನು ಬಂಧಿಸಿ ಮಗು ಕುಸುಮಾಳನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಿವರುದ್ರಸ್ವಾಮಿ ಹಾಗೂ ಸಿಪಿಐ ರಾಮಕೃಷ್ಣ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.