ಶನಿವಾರ, ಫೆಬ್ರವರಿ 27, 2021
31 °C

ಅಂಗಾಂಗ ದಾನಿಗಳ ಕುಟುಂಬಗಳಿಗೆ ಕೃತಜ್ಞತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗಾಂಗ ದಾನಿಗಳ ಕುಟುಂಬಗಳಿಗೆ ಕೃತಜ್ಞತೆ

ಬೆಂಗಳೂರು: ಅಂಗಾಂಗ ದಾನ ದಿನದ ಪ್ರಯುಕ್ತ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಅಂಗಾಂಗ ದಾನ ಮಾಡಿದ 15 ಕುಟುಂಬಗಳು ಹಾಗೂ 10 ಜೀವಂತ ಅಂಗಾಂಗ ದಾನಿಗಳಿಗೆ (5 ಪಿತ್ತಜನಕಾಂಗ ಮತ್ತು 5 ಮೂತ್ರಪಿಂಡ ದಾನಿಗಳು) ಕೃತಜ್ಞತೆ ಸಲ್ಲಿಸಲಾಯಿತು.ಬೈಕ್‌ನಿಂದ ಬಿದ್ದು ಸಾವಿನಂಚಿನಲ್ಲಿದ್ದ ವಾತ್ಸಲ್ಯ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಈ ಬಗ್ಗೆ ಅವರ ಪತಿ ಗಂಗಾಧರಯ್ಯ ಮಾತನಾಡಿ, ‘ನಾವಿಬ್ಬರು ಬೈಕ್‌ನಲ್ಲಿ ಹೋಗುವಾಗ ಪತ್ನಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಆಕೆ ಬದುಕುಳಿಯುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು. ಅಂತಹ ನೋವಿನ ಪರಿಸ್ಥಿತಿಯಲ್ಲೂ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದೆವು. ಇದರಿಂದ ಒಬ್ಬರ ಜೀವ ಉಳಿದಿದೆ’ ಎಂದರು.ದಿಲೀಪ್ ಅವರ ಪತ್ನಿ ವೀಣಾ ಮಾತನಾಡಿ, ‘ನನ್ನ ಪತಿಯ ಅಂಗಾಂಗಗಳನ್ನು ಮೂವರಿಗೆ ದಾನ ಮಾಡಲಾಗಿದೆ. ಅವರು ಮೃತಪಟ್ಟಿದ್ದರೂ ನಮ್ಮ ಜತೆಯಲ್ಲೇ ಇದ್ದಾರೆ ಎಂಬ ಭಾವನೆ ಇದೆ. ಮೂವರ ಜೀವ ಉಳಿಸಿದ ಹೆಮ್ಮೆ ಇದೆ’ ಎಂದರು.ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ  ಅವರು, ‘ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ವ್ಯಕ್ತಿ ಮೃತಪಟ್ಟರೂ ನಾಲ್ಕು ಜನರ ಬಾಳಿಗೆ ಬೆಳಕಾಗಬೇಕು. ಹೀಗಾಗಿ ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಬೇಕು’ ಎಂದು ಮನವಿ ಮಾಡಿದರು.ಎಸಿಪಿ ಸತ್ಯನಾರಾಯಣ ಕುದೂರ್ ಅವರು, ‘ಸಾವಿನ ನಂತರ ಮತ್ತೊಬ್ಬರ ಜೀವ ಉಳಿಸುವುದು ಅತ್ಯಂತ ಮಾನವೀಯ ವಿಚಾರವಾಗಿದೆ’ ಎಂದರು. ಕಿಶೋರ್ ಕುಮಾರ್, ಲಕ್ಷ್ಮಮ್ಮ, ಮರಿಸ್ವಾಮಿ, ರಾಜಣ್ಣ, ಕಿರಣ್, ರಾಮಯ್ಯ, ಬಾಲಕಿ ಹೇಮಶ್ರೀ ಅವರ ಕುಟುಂಬ ವರ್ಗ ಹಾಗೂ ಜೀವಂತ ಪಿತ್ತಜನಕಾಂಗ ದಾನಿಯ ಕುಟುಂಬದ ಉಮಾ ಮಹೇಶ್ವರಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.