ಬುಧವಾರ, ಜೂನ್ 23, 2021
21 °C

ಅಂಗಾಂಶ ಹೊರ ತೆಗೆದು ಕಸಿ ಮಾಡುವ ಪ್ರಯತ್ನ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕೀಲು ಭಾಗಗಳಲ್ಲಿರುವ ಮೃದು ಎಲುಬು (ಕಾರ್ಟಿಲೇಜ್) ಮತ್ತು ಮೂಳೆ ಮುರಿತದ ತೊಂದರೆಗಳಿಂದ ಬಳಲುವ ರೋಗಿಯ ಅಂಗಾಂಶವನ್ನು ಹೊರ ತೆಗೆದು, ಅದನ್ನು ಪ್ರಯೋಗಾಲಯದಲ್ಲಿ ಬೆಳೆಸಿ ಮತ್ತೆ ಅದೇ ರೋಗಿಗೆ ಕಸಿ ಮಾಡುವ ಪ್ರಯತ್ನ ಯಶಸ್ವಿಯಾಗಿದೆ~ ಎಂದು ಮಣಿಪಾಲ್ ಆಸ್ಪತ್ರೆಯ ಕ್ರೀಡಾ ಚಿಕಿತ್ಸಾ ವಿಭಾಗದ ಮುಖ್ಯಸ್ಥ, ಮೂಳೆರೋಗ ತಜ್ಞ ಡಾ.ಹೇಮಂತ್ ಕಲ್ಯಾಣ್ ಹೇಳಿದರು.`ರೋಗಿಯ ಅಂಗಾಂಶವನ್ನೇ ಕಸಿ ಮಾಡುವುದರಿಂದ, ಕಸಿಯಾದ ಭಾಗವು ದೇಹದೊಂದಿಗೆ ಆದಷ್ಟು ಬೇಗ ಹೊಂದಿಕೊಳ್ಳಲಿದೆ. ಇತರ ಯಾವುದೇ ಅಡ್ಡ ಪರಿಣಾಮಗಳ ಅಪಾಯವೂ ಇರುವುದಿಲ್ಲ~ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ನಮ್ಮ ಆಸ್ಪತ್ರೆಯಲ್ಲಿ ಇದುವರೆಗೆ ಐದು ರೋಗಿಗಳಿಗೆ ಅಂಗಾಂಶ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ~ ಎಂದು ಹೇಳಿದ ಅವರು, `ನಡಿಗೆ, ಓಟ ಮತ್ತಿತರ ದೇಹದ ಚಲನೆಗೆ ಮೃದು ಎಲುಬು ಸಹಕಾರಿ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.