ಶನಿವಾರ, ಜನವರಿ 18, 2020
22 °C

ಅಂಗೈಯಲ್ಲಿಕಲಾ ದರ್ಶನ

ಪ್ರಜಾವಾಣಿ ವಾರ್ತೆ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಒಂದು ಸಂಸಾರ ಅಚ್ಚುಕಟ್ಟಾಗಿ ನಡೆಯಬೇಕಾದರೆ ಸಂಸಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳು ಖರೀದಿ ಅನಿವಾರ್ಯ. ಮನೆಗೆ ಬೇಕಾಗುವ ಸಾಮಗ್ರಿಗಳು ಮಾರ್ಕೆಟ್ ತುಂಬೆಲ್ಲ ಓಡಾಡಿ ಕೊಂಡುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಗೃಹಬಳಕೆಯ ವಸ್ತುಗಳ ಖರೀದಿಯೆಂದರೆ ದೊಡ್ಡ ತಲೆನೋವಿನ ಸಂಗತಿಯಾಗಿದೆ.ಜನದಟ್ಟಣೆ ಮಧ್ಯೆ ನುಗ್ಗಿಕೊಂಡು ಹೋಗಿ ಖರೀದಿಸುವುದು ಸಾಮಾನ್ಯ ವಿಷಯವೇನಲ್ಲ. ಇಂದು ಮನೆಗೆ ಬೇಕಾಗುವ ಪೂರಕ ವಸ್ತುಗಳು ಒಂದೆ ಕಡೆಗಳಲ್ಲಿ ಸಿಗಬೇಕು, ಆಗ ಮಾತ್ರ ಜೀವಕ್ಕೆ ಸ್ವಲ್ಪ ನೆಮ್ಮದಿ  ಸಿಕ್ಕಂತಾಗುತ್ತದೆ. ಅಂತಹದೊಂದು ಅವಕಾಶ ಜನರಿಗೆ ಸಿಕ್ಕರೆ ಹೇಗಿರುತ್ತೆ? ಹಾಗಾಗಿಯೇ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಇಂತಹದೊಂದು ಪ್ರಯತ್ನ ನಡೆಯುತ್ತಲೇ ಇರುತ್ತವೆ. ಹೀಗಾಗಿ ಬಿಗ್ ಬಜಾರ್‌ಗಳು, ಮಹಲ್‌ಗಳು ತಲೆ ಎತ್ತುತ್ತಿವೆ.ಗುಲ್ಬರ್ಗ ಜನತೆಗೆ ಒಂದು ವಸ್ತು ತೆಗೆದುಕೊಳ್ಳಲು ಅತ್ತಿತ್ತ ಓಡಾಡುವ ಕಾಟ 17 ದಿನಗಳವರೆಗೆ ತಪ್ಪುವಂತಾಗಿದೆ. ಮನೆಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳು ಈಗ ಗುಡ್‌ಲಕ್ ಹೋಟೆಲ್ ಎದುರಿನ ಖೂಬಾ ಮೈದಾನದಲ್ಲಿ ಜನವರಿ 6ರಿಂದ ಆರಂಭವಾದ ಕಲಾದರ್ಶನದಲ್ಲಿ ಸಿಗುತ್ತವೆ.ಜ. 22ರ ವರೆಗೆ ಮಾತ್ರ ಕಲಾದರ್ಶನ ಗ್ರಾಹಕರನ್ನು ಕೈ ಬೀಸಿ ಕರೆಯಲಿದೆ. ಕರಕುಶಲ ಹಾಗೂ ಕೈಮಗ್ಗದ ವಸ್ತು ಪ್ರದರ್ಶನ ಮತ್ತು ಮಾರಾಟ ಭರ್ಜರಿಯಿಂದ ನಡೆಯುತ್ತಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದ ಒಟ್ಟು 65 ಮಳಿಗೆಗಳು ಇಲ್ಲಿವೆ.ಶಾಂತಿನಿಕೇತನ ಬ್ಯಾಗ್ಸ್, ಜೈಪುರದ ಬಳೆಗಳು, ನಾಗಾಲ್ಯಾಂಡ್ ಡ್ರೈ ಫ್ಲವರ್ಸ್‌, ಜೈಪುರದ ಹೊದಿಕೆ, ಪುಲಕಾರಿ ಸೂಟ್ಸ್, ಸೆಣಬಿನ ಚಪ್ಪಲಿ, ಬಾಂಬೆ ಚೂಡಿದಾರ, ರಾಜಸ್ಥಾನ ಮೊಜಡಿಸ್, ಫ್ಯಾನ್ಸಿ ಆಭರಣ, ಲಕ್ನೋ ಕಿಚನ್ ವರ್ಕ್ಸ್, ಕೋಲ್ಕತಾ ಕಾಂತಾ ಸಾರೀಸ್, ಜೈಪುರ ಡ್ರೆಸ್ ಮೆಟೀರಿಯಲ್ಸ್, ಟಿ.ವಿ. ಸ್ಟ್ಯಾಂಡ್, ಸಹಾರನಪುರ ಫರ್ನಿಚರ್ಸ್‌, ಲೂಧಿಯಾನ ಟಿ ಶರ್ಟ್ಸ್ ಫಿರೋಜಾಬಾದ್ ಗ್ಲಾಸ್ ಸಾಮಗ್ರಿ, ವಿವಿಧ ರೀತಿಯ ಮಕ್ಕಳ ಆಟೋಟ ಸಾಮಾಗ್ರಿ, ರುಚಿಯಾದ ಉಪ್ಪಿನಕಾಯಿ, ಸಿಹಿತಿಂಡಿ, ಆಯುರ್ವೇದ ತೈಲ, ಔಷಧಿ, ಗಣಕಯಂತ್ರದ ಮೂಲಕ ಹೇಳುವ ಸಂಖ್ಯಾಶಾಸ್ತ್ರ ಈ ಹಲವು ಲಾಭಗಳನ್ನು ಗ್ರಾಹಕರು ಪಡೆಯಬಹುದಾಗಿದೆ.`ಗುಲ್ಬರ್ಗದಲ್ಲಿ ಮೂರನೇ ಬಾರಿಗೆ ಈ ಕಲಾದರ್ಶನ ನಡೆಸುತ್ತಿದ್ದೇವೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಕರ್ನಾಟಕದ ಎಲ್ಲ ಭಾಗಗಳಲ್ಲಿ ನಾವು ದರ್ಶನವನ್ನು ಏರ್ಪಡಿಸಿದ್ದೇವೆ. ಹೆಚ್ಚು ನಮಗೆ ಲಾಭ ಸಿಕ್ಕಿದ್ದು ಇಲ್ಲಿಯೇ. ಕರ್ನಾಟಕದಲ್ಲಿ ಉತ್ತಮ ಲಾಭ ಸಿಕ್ಕಿರುವುದರಿಂದ ಈಗ ವಿಜಾಪುರದಲ್ಲಿ ಮತ್ತೊಂದು ಕಲಾದರ್ಶನ ಆರಂಭಿಸಲಾಗಿದೆ. ವ್ಯಾಪಾರಸ್ಥರನ್ನು ಸಂಪರ್ಕಿಸಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಹೇಳುತ್ತೇವೆ. ಜನರು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಇದರಿಂದ ಬೇರೆ ಕಡೆಗಳಲ್ಲಿರುವ ವಸ್ತುಗಳು ಇಲ್ಲಿ ಪ್ರದರ್ಶನವಾಗುತ್ತವೆ.ಅವರಿಗೆ ಒಳ್ಳೆ ಬೆಲೆ ಕೂಡ ಸಿಗುತ್ತಿದೆ~ ಎಂದು ಕಲಾದರ್ಶನದ ಆಯೋಜಕ ಸುಬ್ರಹ್ಮಣ್ಯಂ ತಿಳಿಸಿದರು.

`ಕಡಿಮೆ ಬೆಲೆಯಲ್ಲಿ ಶೀಘ್ರವಾಗಿ ನಮಗೆ ಬೇಕಾಗುವ ವಸ್ತುಗಳು ಸಿಗುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಬೇಕಾಗುವ ವಸ್ತುಗಳು ಇಲ್ಲಿ ಲಭ್ಯ. ಬೇರೆಯವುಗಳಿಗೆ ಹೋಲಿಸಿದರೆ ಇದು ಪ್ಲಸ್ ಪಾಯಿಂಟ್~  ಎನ್ನುತ್ತಾರೆ ಎಸ್.ಬಿ.ಎಚ್. ಉದ್ಯೋಗಿ ಮಮತಾ.`ಎಲ್ಲ ವಸ್ತುಗಳು ಕಡಿಮೆ ಬೆಲೆಯಲ್ಲಿವೆ. ಗ್ರಾಹಕರಿಗೆ ಹೊರೆಯಾಗುವುದಿಲ್ಲ~ ಎಂದು ವಿದ್ಯಾರ್ಥಿನಿ ಲಕ್ಷ್ಮೀ ಹೇಳಿದರು.`ವರ್ಷದಲ್ಲಿ ಎರಡು ಮೂರು ಬಾರಿ ನಮ್ಮ ಜಿಲ್ಲೆಯಲ್ಲಿ ಕಲಾದರ್ಶನ ನಡೆಯುವುದು ಒಳ್ಳೆಯದು~ ಎಂದು ಬಸವರಾಜ ಮುಗಳಿಯವರ ಅಭಿಪ್ರಾಯ.ವ್ಯಾಪಾರಸ್ಥರ ಅನಿಸಿಕೆ: ಇಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಅನೇಕರು ನಾವು ಇಲ್ಲಿಂದ ಬೇರೆ ಕಡೆಗಳಿಗೆ ಹೋದಾಗ ಕೊರಿಯರ್ ಮೂಲಕ ನಮ್ಮ ಆಯುರ್ವೇದಿಕ್ ತೈಲ, ಔಷಧಿಯನ್ನು ತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ಮಾರುತಿ ಆಯುರ್ವೇದಿಕ್ ಇಂಡಸ್ಟ್ರೀಸ್‌ನ ಬಿಂದಿಯಾ.ನಮ್ಮಲ್ಲಿ ಮಕ್ಕಳಿಗೆ ಬೇಕಾಗುವ ಆಟದ ಉಪಕರಣಗಳು ಸಿಗುತ್ತವೆ. ತುಂಬ ಖರೀದಿಯೂ ಆಗುತ್ತಿದೆ. ನಾನು ಇಲ್ಲಿಗೆ ಮೊದಲ ಬಾರಿ ಬಂದಿದ್ದೇನೆ~ ಎಂದು ಸಾಜೀದ್ ಅನ್ವರ್ ನುಡಿದರು.

ಪ್ರತಿಕ್ರಿಯಿಸಿ (+)