ಅಂಗೈಯಲ್ಲೇ ಆರೋಗ್ಯದ ಗುಟ್ಟು

ಫಿಟ್ ಸರ್ಕಲ್ ಮೂಲಕ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ’ ಎಂಬಂತೆ ಯಾವುದೇ ವೈದ್ಯರನ್ನು ಕಾಣದೇ, ಆಸ್ಪತ್ರೆಗೆ ಭೇಟಿ ನೀಡದೇ ಕುಳಿತಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಇಲ್ಲಿ ಸಂಪೂರ್ಣ ಸಂವಹನ ಗೌಪ್ಯವಾಗಿರುತ್ತದೆ.
ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡುವ ಮೂಲಕ ಕಾಯಿಲೆಗಳಿಂದ ದೂರ ಇರುವ ಬಯಕೆ ನಿಮ್ಮದೇ? ನಿಮ್ಮ ಸುಸ್ಥಿರ ಆರೋಗ್ಯಕ್ಕಾಗಿ ಪ್ರತಿದಿನ ನೀವು ಆಸ್ಪತ್ರೆಗೆ ತೆರಳುತ್ತಿದ್ದೀರಾ? ಡಾಕ್ಟರ್ ಭೇಟಿ ನಿಗದಿಪಡಿಸಲಾಗದೇ ಪ್ರಯಾಸ ಪಡುತ್ತಿದ್ದೀರಾ? ಈ ಪ್ರಯಾಸವನ್ನು ಕಡಿಮೆ ಮಾಡಲೆಂದೇ ಹುಟ್ಟಿದೆ ‘ಫಿಟ್ ಸರ್ಕಲ್’.
ಫಿಟ್ ಸರ್ಕಲ್ ಮೂಲಕ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ’ ಎಂಬಂತೆ ಯಾವುದೇ ವೈದ್ಯರನ್ನು ಕಾಣದೇ, ಆಸ್ಪತ್ರೆಗೆ ಭೇಟಿ ನೀಡದೇ ಕುಳಿತಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಇಲ್ಲಿ ಸಂಪೂರ್ಣ ಸಂವಹನ ಗೌಪ್ಯವಾಗಿರುತ್ತದೆ.
ಒಮ್ಮೆ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಲಾಗ್ಆನ್ ಆದರೆ ಆರೋಗ್ಯ ಸಮಸ್ಯೆಗಳು ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳುವ ಬಗ್ಗೆ ಉಚಿತವಾಗಿ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಈ ಆ್ಯಪ್ ಮೂಲಕ ನುರಿತ ವೈದ್ಯರೊಂದಿಗೆ ಚಾಟ್ನ ಮೂಲಕ ಸಂವಹನ ಕೂಡ ಮಾಡಬಹುದು.
ಇಂದಿನ ವೇಗದ ಜಗತ್ತಿನಲ್ಲಿ ‘ಫಿಟ್ಸರ್ಕಲ್’ ನಂತಹ ಆ್ಯಪ್ಗಳು ಜನರ ಸಮಯದ ಪಟ್ಟಿಯನ್ನು ಹೊಂದಾಣಿಕೆ ಮಾಡಲು ಸಹಾಯ ಮಾಡುತ್ತಿದೆ. 2013ರಲ್ಲಿ ವಿವಿಧ ಬ್ರಾಂಡ್ ಹೆಸರುಗಳಲ್ಲಿ ಆರಂಭವಾದ ಈ ಆ್ಯಪ್ ಕೆಲ ವಾರಗಳ ಹಿಂದೆ ಫಿಟ್ಸರ್ಕಲ್ ಎಂದು ಮರುನಾಮಕರಣಗೊಂಡಿದೆ.
‘ಪ್ರತಿಯೊಬ್ಬರು ಕೂಡ ಉತ್ತಮ ಆರೋಗ್ಯ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಪ್ರತಿದಿನ ವೈದ್ಯರನ್ನು ಕಾಣಲು ಬಯಸುವುದಿಲ್ಲ. ಬದಲಾಗಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾಗುವ ಮಾರ್ಗವನ್ನು ಅನುಸರಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಹೊಸ ಮಾಹಿತಿಗಳನ್ನು ತಿಳಿಯಬಯಸುತ್ತಾರೆ.
‘ಫಿಟ್ಸರ್ಕಲ್’ ಆ್ಯಪ್ನ ಚಾಟ್ಬೂಟ್ಸ್ನಲ್ಲಿ ನುರಿತ ತಜ್ಞರು ಫಿಟ್ನೆಸ್ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತಾರೆ’ ಎಂದು ಫಿಟ್ಸರ್ಕಲ್ ಸಂಸ್ಥಾಪಕ ಅರ್ತಿ ಗಿಲ್ ಐಎಎನ್ಎಸ್ಗೆ ತಿಳಿಸಿದ್ದಾರೆ.
ಫಿಟ್ಸರ್ಕಲ್ ಆ್ಯಪ್ ಕಾಯಿಲೆಗಳನ್ನು ಗುಣಪಡಿಸುವುದಕ್ಕಿಂತ ಕಾಯಿಲೆಯನ್ನು ಹೇಗೆ ತಡೆಗಟ್ಟಬಹುದು ಎಂಬುದರ ಮೇಲೆ ಹೆಚ್ಚು ಗಮನ ನೀಡುತ್ತದೆ. ನುರಿತ ತರಬೇತಿದಾರರು, ನ್ಯೂಟ್ರಿಷನಿಸ್ಟ್ ಮತ್ತು ಆರೋಗ್ಯ ಸಲಹೆಗಾರರು ಈ ಆ್ಯಪ್ ಮೂಲಕ ಜನರಿಗೆ ವ್ಯಯುಕ್ತಿಕವಾಗಿ ಸಲಹೆ ಹಾಗೂ ಮಾಹಿತಿಗಳನ್ನು ನೀಡುತ್ತಾರೆ.
‘ಅನೇಕರಲ್ಲಿ ವೈದ್ಯರನ್ನು ಕಂಡರಷ್ಟೇ ಕಾಯಿಲೆಗಳು ಗುಣಹೊಂದುತ್ತವೆ ಎನ್ನುವ ಅತಿಯಾದ ನಂಬಿಕೆ ಇದೆ, ಆದರೆ ನಮ್ಮ ಸುತ್ತಮುತ್ತಲಿರುವ ಪರಿಸರವನ್ನು ಉತ್ತಮಗೊಳಿಸುವುದರೊಂದಿಗೆ, ಆರೋಗ್ಯ ಕಾಯ್ದುಕೊಳ್ಳುತ್ತೇನೆ ಎನ್ನುವ ಛಲವಿದ್ದರೆ ಸಾಕು ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಬಳಕೆದಾರರ ಪೂರೈಕೆಗಳನ್ನು ಯಶಸ್ವಿಯಾಗಿ ಪೂರೈಸುವ ಸಲುವಾಗಿ ಫಿಟ್ಸರ್ಕಲ್ ಸ್ವಯಂಚಾಲಿತ ಟ್ರ್ಯಾಕಿಂಗ್, ಮೇಲ್ವಿಚಾರಣೆ ನಡೆಸುವ ಹೊಸ ರೂಪದ ಚಾಟ್ಬೂಟ್ಸ್ನ್ನು ಕೂಡ ಅಭಿವೃದ್ಧಿ ಪಡಿಸಿದೆ.
ಈಗಿನ ಯುವಜನತೆಗೆ ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿ ಜಾಸ್ತಿ, ಆದ್ದರಿಂದ ಈ ಆ್ಯಪ್ 18ರಿಂದ 35 ವರ್ಷದ ಒಳಗಿನವರನ್ನು ಹೆಚ್ಚು ಆಕರ್ಷಿಸಲಿದೆ ಎಂಬುದು ಆ್ಯಪ್ ಸಂಸ್ಥಾಪಕರ ಅಭಿಪ್ರಾಯ.
ಆ್ಯಪ್ನ ಕಾರ್ಯನಿರ್ವಹಣೆ
ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಇತರ ಆ್ಯಪ್ಗಳು ಬಳಕೆದಾರರಿಗೆ ಶುಲ್ಕ ವಿಧಿಸುತ್ತವೆ. ಆದರೆ ಫಿಟ್ ಸರ್ಕಲ್ ಸಂಪೂರ್ಣ ಉಚಿತವಾಗಿ ಮಾಹಿತಿ ಸಲಹೆ ನೀಡುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.