ಬುಧವಾರ, ಜೂನ್ 23, 2021
21 °C

ಅಂಚಿನಲ್ಲಿರುವವರಿಗೆ ಆದ್ಯತೆ ನೀಡಿ

ಬಿ.ಪ್ರಭು ಅಡವಿಹಾಳ ಎಮ್ಮೆಟ್ಟಿ(ಹುನಗುಂದ) Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರ ನೌಕರರನ್ನು ನೇಮಕ ಮಾಡಿ ಕೊಳ್ಳಲು ಸಾಮಾನ್ಯ ವರ್ಗದವರಿಗೆ ೩೫ ವರ್ಷ, ಇತರ ಹಿಂದುಳಿದ ವರ್ಗದವರಿಗೆ ೩೮ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ೪೦ ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಿರುತ್ತದೆ. ಆದರೆ ಸರ್ಕಾರ ಎಲ್ಲ ಇಲಾಖೆಗಳಲ್ಲೂ ಪ್ರತಿವರ್ಷ ನೇಮಕಾತಿಯ ಅಧಿಸೂಚನೆ ಹೊರಡಿಸುವುದೇ ಇಲ್ಲ. ಉದಾಹರಣೆಗೆ ಶಿಕ್ಷಕರ ನೇಮಕಾತಿ ೨೦೧೦ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು. ಅದರ ನಂತರ ಇದುವರೆಗೂ ಮತ್ತೆ ನೇಮಕಾತಿ ನಡೆದೇ ಇಲ್ಲ. ಅದಾಗಿ ಈಗ ನಾಲ್ಕು ವರ್ಷ ಕಳೆದಿದೆ.ಈ ಸಮಯದಲ್ಲಿ ಸರ್ಕಾರ ನಿಗದಿಪಡಿಸಿದ ವಯೋಮಿತಿಯನ್ನು ದಾಟಿದವರ ಗತಿಯೇನು? ನೇಮಕಾತಿ ಅಧಿಸೂಚನೆ ಹೊರಡಿಸದ ತಪ್ಪಿಗಾಗಿ ಈಗ ಅನೇಕ ಹಿರಿಯ ಪದವೀಧರರ ಜೀವನ ಅಯೋಮಯವಾಗುತ್ತದಲ್ಲವೇ? ಇಲ್ಲದಿದ್ದರೆ ಸರ್ಕಾರ ತನ್ನ ಮುಂದಿನ ನೇಮಕಾತಿಗಳಲ್ಲಿ ವಯೋಮಿತಿಯ ಅಂಚಿನಲ್ಲಿ ರುವವರಿಗೆ ಸಡಿಲಿಕೆ ನೀಡಿ ಅವರಿಗೆ ಯಸ್ಸಿಗನುಗುಣವಾಗಿ ಕೃಪಾಂಕಗಳನ್ನು ನೀಡಿ ನೇಮಕಾತಿಯನ್ನು ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಎಲ್ಲರಿಗೂ  ನ್ಯಾಯ ಒದಗಿಸಲು ಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.