ಅಂಚೆ ಇಲಾಖೆಯಿಂದ ವಿಶ್ವಾಸಾರ್ಹ ಸೌಲಭ್ಯ

7

ಅಂಚೆ ಇಲಾಖೆಯಿಂದ ವಿಶ್ವಾಸಾರ್ಹ ಸೌಲಭ್ಯ

Published:
Updated:

ಹಾವೇರಿ: ನಗರದ ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಹಲವು ವಿನೂತನ ಹಾಗೂ ವಿಶ್ವಾಸಾರ್ಹ ಸೇವೆಗಳು ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕೆಂದು ಅಂಚೆ ಅಧೀಕ್ಷಕ ಆರ್.ಜಿ.ಬ್ಯಾಟಪ್ಪನವರ ವಿನಂತಿಸಿದ್ದಾರೆ.ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರವದ ಅಂಗವಾಗಿ ಇತ್ತೀಚೆಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಅಂಚೆ ಗ್ರಾಹಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕರು ಪತ್ರಗಳನ್ನು ಕಡಿಮೆ ದರದಲ್ಲಿ ದೇಶದ ಮೂಲೆ ಮೂಲೆಗಳಿಗೆ ತಲುಪಿಸಲು (ಸ್ಪೀಡ್ ಪೋಸ್ಟ್) ಪಿಕ್‌ಅಪ್ ಸೇವೆ ಹಾಗೂ 35 ಕೆ.ಜಿ.ಯವರೆಗೆ ಸರಕುಗಳನ್ನು ಶೀಘ್ರವಾಗಿ ದೇಶವ್ಯಾಪಿ ತಲುಪಿಸಲು ಎಕ್ಸ್ ಪ್ರೆಸ್ ಪಾರ್ಸ್‌ಲ್ ಪೋಸ್ಟ್ ಸೇವೆ ಲಭ್ಯ ಇದೆ ಎಂದರು.ಗ್ರಾಹಕರು ಹೆಚ್ಚಿನ ಸಂಖ್ಯೆಯ ಪತ್ರಗಳಿಗೆ ಸ್ಟಾಂಪ್ ಹಚ್ಚದೆ ತಮ್ಮ ಎಲ್ಲ ಪತ್ರಗಳನ್ನು ಅಂಚೆ ಕಚೇರಿಗೆ ತಲುಪಿಸಿ ದರೆ ಸಾಕು, ಅಂಚೆ ಸಿಬ್ಬಂದಿಯೇ  ಸ್ಪಾಂಪ್ ಅಂಟಿಸಿ, ನಿಗದಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ಹೊರುತ್ತದೆ. ಇದಕ್ಕೆ ನಿಗದಿತ ಅಂಚೆ ವೆಚ್ಚ ಮತ್ತು ಸೇವಾದರ ನೀಡಬೇಕಾಗುತ್ತದೆ ಎಂದು ತಿಳಿಸಿದರು.ಬಿಲ್ ಮೇಲ್ ಸೇವೆ: ಅಡಿಯಲ್ಲಿ ಬ್ಯಾಂಕ್, ಹಣಕಾಸು ಸಂಸ್ಥೆಗಳು ಮಾಸಿಕ ಸ್ಟೇಟ್‌ಮೆಂಟ್‌ಗಳನ್ನು ಅಥವಾ ಹಣ ತುಂಬುವ ಸೂಚನಾ ಪತ್ರಗಳನ್ನು ತಮ್ಮ ಗ್ರಾಹಕರಿಗೆ ತಲುಪಿಸಬಹುದು. ಮಿಡಿಯಾ ಪೋಸ್ಟ್ ಸೇವೆಯಲ್ಲಿ ಯಾವುದೇ ಕಂಪೆನಿ, ವ್ಯಕ್ತಿ, ಸಂಘ ಸಂಸ್ಥೆಗಳು ಉತ್ಪಾದಿಸುವ ತಮ್ಮ ಉತ್ಪನ್ನಗಳ ಜಾಹೀರಾತುಗಳನ್ನು ಅಂಚೆ ಇಲಾಖೆ ಸಾಮಗ್ರಿಗಳ ಮೇಲೆ ಮುದ್ರಿಸಿ, ಹೆಚ್ಚು ಪ್ರಚಾರವನ್ನು ಅತಿ ಕಡಿಮೆ ಸಮಯದಲ್ಲಿ ಪಡೆಯಬಹುದು ಎಂದು ಹೇಳಿದರು.ಡೈರೆಕ್ಟ್ ಪೋಸ್ಟ್ ಸೇವೆ ಅಡಿಯಲ್ಲಿ ಯಾವುದೇ ಕಂಪೆನಿ, ವ್ಯಕ್ತಿ, ಸಂಘ ಸಂಸ್ಥೆಗಳು ಉತ್ಪಾದಿಸುವ ತಮ್ಮ ಉತ್ಪನ್ನಗಳ ಜಾಹೀರಾತು ಕರಪತ್ರ ಗಳನ್ನು ಅಂಚೆ ಮೂಲಕ ಕೇವಲ ರೂ.1.50 (ಪ್ರತಿ ಕರ ಪತ್ರಕ್ಕೆ) ಬೇರೆ ಬೇರೆ ಸ್ಥಳದಲ್ಲಿರುವ ತಮ್ಮ ಗ್ರಾಹಕರಿಗೆ ತಲುಪಿಸಬಹುದು.

 

ಈ ಅಂಚೆ ಸೇವೆ ಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯ ಇಲ್ಲದವರು ಕೂಡಾ ಈ ಸೇವೆಯ ಮೂಲಕ ತಮ್ಮ ಸಂದೇಶವನ್ನು ಎ-4 ಸೈಜಿನ ಪುಟಕ್ಕೆ ಕೇವಲ 10 ರೂ. ಗಳಲ್ಲಿ ಅತೀ ತ್ವರಿತವಾಗಿ ಕಳಿಸಬಹುದು ಎಂದು ತಿಳಿಸಿದರು.ಲಾಜಿಸ್ಟಿಕ್ ಪೋಸ್ಟ್ ಸೇವೆಯಲ್ಲಿ ಗ್ರಾಹಕರು ದೊಡ್ಡ ಗಾತ್ರದ ಸರಕು ಸಾಮಾನುಗಳನ್ನು ದೇಶದ ಮೂಲೆ ಮೂಲೆಗಳಿಗೂ ತಲುಪಿಸಬಹುದು. ರಿಟೇಲ್ ಪೋಸ್ಟ್ ಸೇವೆಯಲ್ಲಿ ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಯ ಅರ್ಜಿಗಳ ಮಾರಾಟ, ಟೆಲಿಪೋನ್ ಬಿಲ್‌ಗಳ ಸ್ವೀಕರಣೆ ಸೌಲಭ್ಯಗಳನ್ನು ಗ್ರಾಹಕರು ಹತ್ತಿರದ ಅಂಚೆ ಕಚೇರಿಯಿಂದ ಪಡೆಯು ಸೌಲಭ್ಯ ಕಲ್ಪಿಸಲಾಗಿದೆ ಎಂದರು.ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ, ಭಾರತ ಸರ್ಕಾರದ ಜೀವ ವಿಮಾ ಯೋಜನೆಗಳು ಈ ಯೋಜನೆಗಳು ಇತರೆಲ್ಲ ಜೀವ ವಿಮೆ ಕಂಪೆನಿಗಳಿಂತ ಕಡಿಮೆ ಪ್ರೀಮಿಯಂ ಮತ್ತು ಹೆಚ್ಚಿನ ಬೋನಸ್ ನೀಡುತ್ತವೆ. ಹೀಗೆ ಅಂಚೆ ಕಚೇರಿ ಹಲವಾರು ಸೇವೆಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿ ಅಥವಾ ಅಧೀಕ್ಷಕರ ಕಚೇರಿ ಸಂಪರ್ಕಿ ಸುವಂತೆ ಬ್ಯಾಟಪ್ಪನವರ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪೋಸ್ಟ್ ಫೋರಂ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್. ಹಿರೇಮಠ, ಕಂದಾಯಧಿಕಾರ ವಿನೋದ ಕುಮಾರ, ಎಲ್‌ಐಸಿಯ ಎ.ಎಸ್. ಹವಳದ, ಕೆಜಿಐಡಿ ಸಿಬ್ಬಂದಿ ಆರ್.ಡಿ . ಖಾದ್ರಿ, ಪೋಸ್ಟ್ ಫೋರಂ ಸದಸ್ಯ ಸಿ.ಎಸ್.ಮರಳಿಹಳ್ಳಿ ಹಾಜರಿದ್ದರು.ಎಂ.ವಿ.ಬಸಾಪುರ, ದೀಪಾ, ಅಂಚೆ ದೂರು ನಿರೀಕ್ಷಕ ಜಾಫರ್‌ಸಾಬ ಮ್ಯಾಗೇರಿ, ಶಿಗ್ಗಾವಿ ಅಂಚೆ ಉಪ ವಿಭಾ ಗದ ನಿರೀಕ್ಷಕ ಎನ್.ಜಿ.ಬಂಗಿಗೌಡ್ರ, ಅಂಚೆ ಪಾಲಕ ಸಿ.ಕೆ.ಮುತ್ತಗಿ ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಸಾದಿಕ್ ಬಂಕಾಪುರ ನಿರೂಪಿಸಿದರು.ಉದ್ಯೋಗ ಮೇಳ ಇಂದಿನಿಂದ

ಹುಬ್ಬಳ್ಳಿ:
ನಗರದ ಲಾಜಿಕ್ ಕಂಪ್ಯೂ ಟರ್ ಸಂಸ್ಥೆ ವತಿಯಿಂದ ಇದೇ 20ರಿಂದ 27ರ ವರೆಗೆ ಬೆಳಿಗ್ಗೆ 9.30 ಗಂಟೆ ಯಿಂದ ರಾತ್ರಿ ಎಂಟು ಗಂಟೆಯವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ, ಎಂಜಿನಿಯರಿಂಗ್ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿ ಸಬಹುದು. ಮಾಹಿತಿಗೆ ವಿದ್ಯಾನಗರದ ಮಿರ್ಜಾನಕರ ವಾಣಿಜ್ಯ ಸಂಕೀರ್ಣ ದಲ್ಲಿಯ ಲಾಜಿಕ್ ಕಂಪ್ಯೂಟರ್ ಕೇಂದ್ರ ಇಲ್ಲವೆ 9731822984 ಅಥವಾ 8105971318 ಮೊಬೈಲ್ ಫೋನುಗಳನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry