ಶುಕ್ರವಾರ, ಏಪ್ರಿಲ್ 16, 2021
31 °C

ಅಂಚೆ ಇಲಾಖೆ: ಶೀಘ್ರದಲ್ಲೇ ಸ್ಮಾರ್ಟ್‌ಕಾರ್ಡ್ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ಅಂಚೆ ಇಲಾಖೆ (ಡಿಒಪಿ) ಮೇ ತಿಂಗಳ 15ರ ಒಳಗೆ ಪೂರ್ವ ಪಾವತಿ ಸ್ಮಾರ್ಟ್ ಕಾರ್ಡುಗಳನ್ನು ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.  ದೂರಸಂಪರ್ಕ ಇಲಾಖೆ ನಿಗದಿಪಡಿಸಿದ್ದ  ‘100 ದಿನಗಳ ಗುರಿ’ ಪೂರೈಸಿದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಬಲ್, ಸ್ಮಾರ್ಟ್‌ಕಾರ್ಡ್ ಬಿಡುಗಡೆಗೆ ಸಂಬಂಧಿಸಿದಂತೆ ಅಂಚೆ ಇಲಾಖೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಬ್ಯಾಂಕ್ ಅನುಮೋದನೆ ನೀಡುತ್ತಿದ್ದಂತೆ ಕಾರ್ಡ್ ಬಿಡುಗಡೆಯಾಗಲಿದೆ ಎಂದರು.

 

ಈ ವೈಟ್ ಲೈನ್ ಪೂರ್ವಪಾವತಿ ಸ್ಮಾರ್ಟ್‌ಕಾರ್ಡುಗಳು ಈಗ ಬಳಕೆಯಲ್ಲಿರುವ ಇತರೆ ಕ್ರೆಡಿಟ್ ಕಾರ್ಡ್‌ಗಳನ್ನೇ ಹೋಲುತ್ತವೆ. ಇದನ್ನು ಬಳಸಿ ಗ್ರಾಹಕರು ಅಂಗಡಿಗಳಲ್ಲಿ  ಹಣ ಪಾವತಿಸಬಹುದು. ಆನ್‌ಲೈನ್ ಮತ್ತು ಮೊಬೈಲ್ ಮೂಲಕ ಹಣಕಾಸಿನ ವಹಿವಾಟು ನಡೆಸಬಹುದು.  ` 1,000 ದಿಂದ ` 50,000ವರೆಗೆ ಮೌಲ್ಯ ಇರುವ ಕಾರ್ಡುಗಳು ಅಂಚೆ ಇಲಾಖೆಗಳಲ್ಲಿ ಲಭ್ಯವಿರುತ್ತವೆ. ‘ಸ್ಮಾರ್ಟ್ ಕಾರ್ಡ್ ಯೋಜನೆಗಾಗಿ ಅಂಚೆ ಇಲಾಖೆ ‘ಎಚ್‌ಬಿಎಸ್‌ಸಿ’, ‘ಐಸಿಐಸಿಐ’, ಮತ್ತು ‘ಐಡಿಬಿಐ’ ಬ್ಯಾಂಕುಗಳ ಜತೆ ಸಹಭಾಗಿತ್ವ ಹೊಂದಿದೆ. ಎಲ್ಲ ರೀತಿಯ ಹಣಕಾಸು ವಹಿವಾಟುಗಳಲ್ಲಿ ಈ ಕಾರ್ಡ್ ಅನ್ನು ಬಳಸಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.