ಭಾನುವಾರ, ನವೆಂಬರ್ 17, 2019
29 °C

ಅಂಚೆ ಉಳಿತಾಯ ಖಾತೆಗೂ ತೆರಿಗೆ

Published:
Updated:

ನವದೆಹಲಿ (ಪಿಟಿಐ): ಅಂಚೆ ಉಳಿತಾಯ ಖಾತೆ ಹೊಂದಿರುವವರು ಪಡೆಯುವ ಬಡ್ಡಿಯ ಮೇಲೆ ಪ್ರಸಕ್ತ ಆರ್ಥಿಕ ವರ್ಷದಿಂದ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕೇಂದ್ರೀಯ ನೇರ ತೆರಿಗೆ ಮಂಡಳಿ ಈ ಸಂಬಂಧ ಇತ್ತೀಚೆಗಷ್ಟೇ ಅಧಿಸೂಚನೆ ಹೊರಡಿಸಿದ್ದು, ಅಂಚೆ ಉಳಿತಾಯ ಖಾತೆ ಹೊಂದಿರುವವರು ಪಡೆಯುವ 3,500 (ವೈಯಕ್ತಿಕ ಖಾತೆ) ಮತ್ತು 7,000 ರೂಪಾಯಿಗಿಂತಲೂ (ಜಂಟಿ ಖಾತೆ) ಅಧಿಕ ಬಡ್ಡಿಯ ಮೇಲೆ ಈ ಆರ್ಥಿಕ ವರ್ಷದಿಂದ ತೆರಿಗೆ ವಿಧಿಸಲಿದೆ.ಇನ್ನು ಮುಂದೆ ತೆರಿಗೆದಾರರು ಆದಾಯ ತೆರಿಗೆ ಲೆಕ್ಕ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಂಚೆ ಉಳಿತಾಯ ಖಾತೆ ಯೋಜನೆಯಲ್ಲಿ ಮಾಡಿರುವ ಹೂಡಿಕೆಯನ್ನು ನಮೂದಿಸಬೇಕು.`ಅಂಚೆ ಉಳಿತಾಯ ಖಾತೆ ಯೋಜನೆಗಳಲ್ಲಿ ಬಂಡವಾಳ ಹೂಡುವ ತೆರಿಗೆದಾರರು ಇನ್ನು ಮುಂದೆ ತಾವು ಪಡೆದಿರುವ ಬಡ್ಡಿಯ ಮಾಹಿತಿಯನ್ನು ಆದಾಯ ಲೆಕ್ಕ ಪತ್ರ ಸಲ್ಲಿಸುವ ಸಂದರ್ಭದಲ್ಲಿ ನೀಡಬೇಕು. ವೈಯಕ್ತಿಕ ಖಾತೆ ಸಂದರ್ಭದಲ್ಲಿ 3,500 ರೂಪಾಯಿವರೆಗಿನ ಬಡ್ಡಿಗೆ ಹಾಗೂ ಹಾಗೂ ಜಂಟಿ ಖಾತೆಗೆ 7,000 ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ನೀಡಲಾಗುವುದು~ ಎಂದು  ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಂಚೆ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಪ್ರಸ್ತುತ ವಾರ್ಷಿಕ ಶೇ 3.5ಬಡ್ಡಿದರ ನೀಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)