ಸೋಮವಾರ, ಅಕ್ಟೋಬರ್ 21, 2019
26 °C

ಅಂಚೆ ಉಳಿತಾಯ ಯೋಜನೆ ಬಡ್ಡಿ ದರ ಸ್ಥಿರ: ಸ್ಪಷ್ಟನೆ

Published:
Updated:

ನವದೆಹಲಿ (ಪಿಟಿಐ): ಅಂಚೆ ಇಲಾಖೆಯ ಉಳಿತಾಯ ಖಾತೆ ಬಡ್ಡಿ ದರಗಳು ಯೋಜನೆ ಅವಧಿ ಉದ್ದಕ್ಕೂ ಸ್ಥಿರವಾಗಿರುತ್ತವೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.ಇಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ರತಿ ವರ್ಷದ ಏಪ್ರಿಲ್ ತಿಂಗಳಲ್ಲಿ ಬಡ್ಡಿ ದರ ಘೋಷಿಸಲಾಗುವುದು. ಈ ಬಡ್ಡಿ ದರಗಳು ಆ ವರ್ಷದ ಯೋಜನೆ ಪರಿಪಕ್ವಗೊಳ್ಳುವವರೆಗೆ(ಮ್ಯಾಚುರಿಟಿ) ಜಾರಿಯಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು  ತಿಳಿಸಲಾಗಿದೆ.ಉಳಿತಾಯ ಯೋಜನೆಗಳಿಗೆ ಅನ್ವಯಿಸುವ ಬಡ್ಡಿ ದರಗಳು ಇದೇ ಬಗೆಯ ಪರಿಪಕ್ವ ಅವಧಿ ಹೊಂದಿರುವ  ಸರ್ಕಾರದ ಸಾಲ ಪತ್ರಗಳ ಬಡ್ಡಿ ದರದಷ್ಟೇ ಇರುತ್ತವೆ. ಈ ಯೋಜನೆಗೆ  ಬದಲಾಗುವ ಬಡ್ಡಿ ದರ ಅನ್ವಯಿಸಲಾಗುತ್ತಿದೆ ಎನ್ನುವ ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯು ಈ ಸ್ಪಷ್ಟನೆ ನೀಡಿದೆ.ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಗೆ ಮಾತ್ರ ಈ ನಿಬಂಧನೆ ಅನ್ವಯಿಸಲಾರದು. `ಪಿಪಿಎಫ್~ ಬಡ್ಡಿಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತವೆ.ಡಿಸೆಂಬರ್‌ನಿಂದ ಜಾರಿಗೆ ಬರುವಂತೆ,  `ಪಿಪಿಎಫ್~ ಬಡ್ಡಿ ದರಗಳನ್ನು ಶೇ 8ರಿಂದ ಶೇ 8.6ಕ್ಕೆ  ಹೆಚ್ಚಿಸಲಾಗಿದೆ. ಅಂಚೆ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು  ಶೇ 3.5ರಿಂದ ಶೇ 4ಕ್ಕೆ ಮತ್ತು ಮಾಸಿಕ ವರಮಾನ ಯೋಜನೆ  ಬಡ್ಡಿ ದರಗಳನ್ನೂ ಹೆಚ್ಚಿಸಲಾಗಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)