ಅಂಚೆ ಕಚೇರಿಗಳಲ್ಲಿ 1ಸಾವಿರ ಎಟಿಎಂ ಸ್ಥಾಪನೆಗೆ ಚಿಂತನೆ

7

ಅಂಚೆ ಕಚೇರಿಗಳಲ್ಲಿ 1ಸಾವಿರ ಎಟಿಎಂ ಸ್ಥಾಪನೆಗೆ ಚಿಂತನೆ

Published:
Updated:

ನವದೆಹಲಿ, (ಪಿಟಿಐ): ಅಂಚೆ ಕಚೇರಿಗಳಲ್ಲಿ 1 ಸಾವಿರಕ್ಕೂ ಅಧಿಕ ಎಟಿಎಂ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಗೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಬಲ್ ಅವರು, ~ಪ್ರಸ್ತುತ ರಾಷ್ಟ್ರದಾದ್ಯಂತ ಸುಮಾರು 1,54,688 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ರಾಷ್ಟ್ರದಲ್ಲಿನ ಅಂಚೆ ಕಚೇರಿ ಜಾಲವು ವಿಶ್ವದಲ್ಲಿಯೇ ಅತಿ ದೊಡ್ಡದು~ ಎಂದು ಅವರು ಬಣ್ಣಿಸಿದರು. ಅಂಚೆ ಕಚೇರಿಯ ಕಾರ್ಯ ವ್ಯಾಪ್ತಿಯನ್ನು ಇನ್ನೂ ಹೆಚ್ಚಿಸುವ ಹಾಗೂ ಇಲ್ಲಿಗೆ ಆಗಮಿಸುವ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಕಚೇರಿಗಳಲ್ಲಿ ಸುಮಾರು 1ಸಾವಿರಕ್ಕೂ ಅಧಿಕ ಎಟಿಎಂ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅವುಗಳನ್ನು ~ಕೋರ್ ಬ್ಯಾಂಕಿಂಗ್~ ವ್ಯವಸ್ಥೆಗೆ ಪರಿವರ್ತಿಸಲಾಗುವುದು ಎಂದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry