ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ

7

ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ

Published:
Updated:
ಅಂಚೆ ನೌಕರರಿಂದ ಶಾಸಕ ಪಾಟೀಲರಿಗೆ ಮನವಿ

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಇಲ್ಲಿನ ಅಂಚೆ ಇಲಾಖೆಯ ಎದುರಿಗೆ ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಶಾಸಕ ವಿ.ಎಸ್.ಪಾಟೀಲ ಶನಿವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅಂಚೆ ನೌಕರರು ತಮ್ಮ ಬೇಡಿಕೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಗ್ರಾಮೀಣ ಅಂಚೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದರು ಹಾಗೂ ಸರ್ಕಾರದ ವತಿಯಿಂದ ಕೆಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.ಸಂಚೆ ನೌಕರರಾದ ನಾರಾಯಣ ಮೂಳೆ, ಆರ್.ಆರ್.ಲಮಾಣಿ, ಉದಯ ಗಾಂಜೇಕರ, ಸಿ.ಎಸ್.ಕುಲಕರ್ಣಿ, ಎ.ಎನ್.ಕುಲಕರ್ಣಿ, ಎಸ್.ಬಿ.ಐಹೊಳೆ, ಆರ್.ಆರ್.ಅರ್ಕಸಾಲಿ, ಐ.ಎಸ್.ಕಮ್ಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry