ಮಂಗಳವಾರ, ಏಪ್ರಿಲ್ 13, 2021
30 °C

ಅಂಜಲಿ ಈಗ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಉದ್ಯಾನದ ಸಸ್ಯಹಾರಿ ಸಫಾರಿಯ ಅಂಜಲಿ ಎಂಬ ಕಾಡೆಮ್ಮೆ ಆ.10ರಂದು ಮರಿಗೆ ಜನ್ಮ ನೀಡಿದೆ. 2012ರ ಫೆಬ್ರವರಿಯಲ್ಲಿ ಮೈಸೂರು ಮೃಗಾಲಯದಿಂದ ಇಲ್ಲಿನ ಉದ್ಯಾನಕ್ಕೆ ತರುವಾಗಲೇ ಗರ್ಭಿಣಿಯಾಗಿದ್ದ ಅಂಜಲಿ ಈಗ ತಾಯಿಯಾಗಿದ್ದಾಳೆ. ತಾಯಿ ಹಾಗೂ ಮರಿಎರಡು ಆರೋಗ್ಯದಿಂದಿವೆ. ಈ ಮರಿ ಸೇರಿ 5ಗಂಡು ಹಾಗೂ 4ಹೆಣ್ಣು ಕಾಡೆಮ್ಮೆಗಳಿವೆ. ನವಜಾತ ಕಾಡೆಮ್ಮೆ ಮರಿ ವೀಕ್ಷಣೆಗೆ ಲಭ್ಯವಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.