ಗುರುವಾರ , ಜನವರಿ 30, 2020
23 °C

ಅಂಟಾರ್ಕ್ಟಿಕಾದಲ್ಲಿ ಇಸ್ರೊ ಚಟುವಟಿಕೆ ಸ್ಥಗಿತ: ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಂಟಾರ್ಕ್ಟಿಕಾದ ಭಾರತೀಯ ಸಂಶೋ­ಧನಾ ಕೇಂದ್ರದಲ್ಲಿ ಇಸ್ರೊ ಚಟುವಟಿಕೆಗಳು ಸ್ಥಗಿತವಾದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ದೂರದ ಸ್ಥಳದಲ್ಲಿ ಇಂಧನ ಕೊರತೆ ಉಂಟಾಗಿರುವುದು ಮತ್ತು ತಂಡದ ನಾಯಕಿ ಜೊತೆ ಅವರ ಅಧೀನ ಸಹೋ­ದ್ಯೋಗಿಗಳ ಘರ್ಷಣೆ­ ನಡೆದಿರು­ವುದು ಇಸ್ರೊ ಚಟು­ವಟಿಕೆಗಳ ಸ್ಥಗಿತಕ್ಕೆ ಕಾರಣ ಎಂದು ಆರೋ­ಪಿಸ­­ಲಾಗಿದೆ.ಈ ಕಹಿ ಘಟನೆ ಕುರಿತು ಭೂವಿಜ್ಞಾನ ಸಚಿವಾಲಯ ತನಿಖೆ ನಡೆಸಲಿದೆ ಎಂದು  ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೈಪಾಲ್‌ ರೆಡ್ಡಿ ಶುಕ್ರ­ವಾರ ಇಲ್ಲಿ ತಿಳಿಸಿ­ದರು. ರಾಷ್ಟ್ರೀಯ ಭದ್ರತೆ ಮತ್ತು ಯೋಜ­­ನೆಯ ಯಶಸ್ಸಿನ ಹಿತ­ದೃಷ್ಟಿ­­ಯಿಂದ ಈ ತನಿಖೆ ನಡೆಯಲಿದೆ ಎಂದು ಹೇಳಿದರು.ಆದರೆ ಭೂ­ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಶೈಲೇಶ್‌ ನಾಯಕ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.  ಈ ಸಂಶೋಧನಾ ಕೇಂದ್ರ ‘ಭಾರ್ತಿ’­ಯು ಇಸ್ರೊದ 20ಕ್ಕೂ ಹೆಚ್ಚಿನ ಉಪ­ಗ್ರಹಗಳಿಗೆ ಅಂಕಿ–ಅಂಶಗಳನ್ನು ಒದಗಿ­ಸು­ತ್ತಿದೆ ಮತ್ತು ದೇಶದ ವಿವಿಧ ವೈಜ್ಞಾ­ನಿಕ ಸಂಸ್ಥೆಗಳ 17ಕ್ಕೂ ಅಧಿಕ ನೌಕ­ರ­ರನ್ನು ಹೊಂದಿದೆ. ಇದೇ ಅಕ್ಟೋ­ಬರ್‌­ನಲ್ಲಿ ಇಸ್ರೊ ಚಟುವಟಿಕೆ ಸ್ಥಗಿತವಾಗಿದೆ.

ಪ್ರತಿಕ್ರಿಯಿಸಿ (+)