ಬುಧವಾರ, ಜನವರಿ 22, 2020
28 °C

ಅಂಟಾರ್ಕ್ಟಿಕಾದಲ್ಲಿ ವಜ್ರ ನಿಕ್ಷೇಪ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌ (ಪಿಟಿಐ): ಹಿಮಾಚ್ಛಾದಿತ ಅಂಟಾರ್ಕ್ಟಿಕಾದ ಪರ್ವತ ಶ್ರೇಣಿಯಲ್ಲಿ ವಜ್ರಗಳ ನಿಕ್ಷೇಪ ಹುದುಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಕಿಂಬರ್ಲೈಟ್‌ (ಅಗ್ನಿಶಿಲೆ) ರೀತಿಯ ಬಂಡೆಗಳ ತುಣುಕು­ಗಳನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು,  ಇದರಲ್ಲಿ ವಜ್ರದಂಶ ಇರುವ ಕುರುಹು ಪತ್ತೆಯಾಗಿದೆ ಎಂದಿದ್ದಾರೆ. ಅಂಟಾರ್ಕ್ಟಿಕಾದ ಪೂರ್ವ ಭಾಗದಲ್ಲಿನ ಗಿರಿಶ್ರೇಣಿಯಲ್ಲಿ ಈ ವಜ್ರಗಳು ಶೀತಲೀಕರಣ­ಗೊಂಡು ಕಾಯಂ ಆಗಿ ಶೇಖರಗೊಂಡಿವೆ.ಇಂತಹದ್ದೇ ಕಿಂಬರ್ಲೈಟ್‌ಗಳು ಆಫ್ರಿಕಾ, ಸೈಬೀರಿಯಾ ಮತ್ತು ಆಸ್ಟೇಲಿಯಾಗಳಲ್ಲೂ ಇರುವ ಕುರುಹುಗಳು ದೊರತಿವೆ ಎಂಬ ವಿಜ್ಞಾನಿಗಳ ಹೇಳಿಕೆ ‘ಬಿಬಿಸಿ ನ್ಯೂಸ್‌’ನಲ್ಲಿ ವರದಿಯಾಗಿದೆ.

ಪ್ರತಿಕ್ರಿಯಿಸಿ (+)