ಅಂಟಾರ್ಕ್ಟಿಕಾ: ಹಡಗು ರಕ್ಷಣೆ

7

ಅಂಟಾರ್ಕ್ಟಿಕಾ: ಹಡಗು ರಕ್ಷಣೆ

Published:
Updated:
ಅಂಟಾರ್ಕ್ಟಿಕಾ: ಹಡಗು ರಕ್ಷಣೆ

ಸಿಡ್ನಿ (ಎಎಫ್‌ಪಿ): ಅಂಟಾರ್ಕ್ಟಿಕಾಗೆ ಅಧ್ಯಯನಕ್ಕಾಗಿ ತೆರಳಿ ಸಮುದ್ರ ಮಧ್ಯೆ ಮಂಜುಗಡ್ಡೆಯಲ್ಲಿ  ಸಿಲುಕಿದ್ದ ರಷ್ಯಾದ ಹಡಗು ಬುಧವಾರ ಕೊನೆಗೂ ಸಂಕಷ್ಟದಿಂದ ಪಾರಾಗಿದೆ.

ಮಂಜುಗಡ್ಡೆಯನ್ನು ಭೇದಿಸುವ ಅಮೆರಿಕದ ನೌಕೆಯ ನೇತೃತ್ವದಲ್ಲಿ ನಡೆದ ಅತ್ಯಂತ ಸಂಕೀರ್ಣ ಅಂತರರಾಷ್ಟ್ರೀಯ ಕಾರ್ಯಾಚರಣೆಯು ಯಶಸ್ವಿಯಾಗಿ ರಷ್ಯಾದ ಹಡಗನ್ನು ಸಂಕಷ್ಟದಿಂದ ಪಾರು ಮಾಡಿದೆ.

ವಿವಿಧ ರಾಷ್ಟ್ರಗಳ ೨೨ ವಿಜ್ಞಾನಿಗಳು, ೨೦ ವಿಜ್ಞಾನ ಸಹಾಯಕರು ಸೇರಿದಂತೆ ಒಟ್ಟು ೭೪ ಜನರು ರಷ್ಯಾದ ‘ಅಕಾಡೆಮಿಕ್‌ ಶೋಕಾಲ್‌ಸ್ಕಿ’ ಹಡಗಿನಲ್ಲಿ ಕಳೆದ ಡಿಸೆಂಬರ್‌ 8ರಂದು ಅಂಟಾರ್ಕ್ಟಿಕಾ ಖಂಡ­ಕ್ಕೆ   ವಿಶೇಷ ವಿಜ್ಞಾನ­ಯಾತ್ರೆ ಕೈಗೊಂಡಿದ್ದರು. ಆದರೆ, ತೀವ್ರ ಹಿಮ ಮಾರುತದಿಂದಾಗಿ ಮಂಜುಗಡ್ಡೆಗಳಿಂದ ಹೆಪ್ಪುಗಟ್ಟಿದ ಸಮುದ್ರದಲ್ಲಿ ಈ ಹಡಗು ಸಿಲುಕಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry