ಅಂತರನಕ್ಷತ್ರೀಯ ವಾತಾವರಣ ಪ್ರವೇಶಿಸಿದ ವೋಯಜರ್

7

ಅಂತರನಕ್ಷತ್ರೀಯ ವಾತಾವರಣ ಪ್ರವೇಶಿಸಿದ ವೋಯಜರ್

Published:
Updated:

ವಾಷಿಂಗ್ಟನ್‌(ಪಿಟಿಐ): ಮೂವತ್ತಾರು ವರ್ಷಗಳ ಹಿಂದೆ ಉಡಾವಣೆ ಮಾಡಲಾಗಿದ್ದ ಅಮೆರಿಕದ  ನಾಸಾದ ವೋಯಜರ್‌–1 ಗಗನನೌಕೆ ಈಗ ಸೂರ್ಯನಿಂದ 1,900 ಕೋಟಿ ಕಿ.ಮೀನಷ್ಟು ದೂರದಲ್ಲಿ ಇದ್ದು, ಅಂತರನಕ್ಷತ್ರೀಯ ವಾತಾವರಣ ಪ್ರವೇಶಿಸಿರುವ ಮೊದಲ ಮಾನವ ನಿರ್ಮಿತ ವ್ಯೊಮನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ವೋಯಜರ್‌–1 ಕಳುಹಿಸಿರುವ ಹೊಸ ಮತ್ತು ಅನಿರೀಕ್ಷಿತವಾದ ದತ್ತಾಂಶಗಳು ಒಂದು ವರ್ಷದಿಂದ ಉಪಕರಣವು ಎರಡು ನಕ್ಷತ್ರಗಳ ನಡುವೆ ಕಂಡು ಬರುವ ಪ್ಲಾಸ್ಮಾ ಅಥವಾ ಅಯಾನೀಕೃತ ಅನಿಲದ ಮೂಲಕ ಸಂಚರಿಸಿರುವುದು ತಿಳಿದುಬಂದಿದೆ. ಹೊಸ ದತ್ತಾಂಶಗಳಿಂದಾಗಿ  ಅಂತರನಕ್ಷತ್ರೀಯ ವಾತಾವರಣದಲ್ಲಿ ಮನುಕುಲದ ಐತಿಹಾಸಿಕ ನೆಗೆತ ಇದು ಎಂದು ನಂಬಿರುವುದಾಗಿ ವೋಯಜರ್‌ ಯೋಜನೆಯ ವಿಜ್ಞಾನಿ ಎಡ್‌ ಸ್ಟೋನ್ ತಿಳಿಸಿದ್ದಾರೆ.ಸೂರ್ಯನ ಪ್ರಭಾವವಿಲ್ಲದ ಅಂತರನಕ್ಷತ್ರೀಯ ವಾತಾವರಣಕ್ಕೆ ವೋಯಜರ್‌ ಯಾವಾಗ ಪ್ರವೇಶಿಸಲಿದೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದರು.  ಸದ್ಯ ವೋಯಜರ್‌ ಸೌರಮಂಡಲದ ಪರಿಧಿಯ ಹೊರಭಾಗದಲ್ಲಿದ್ದು, ಆ ಪ್ರದೇಶದಲ್ಲಿ ಸೂರ್ಯನ ಪ್ರಭಾವ ಇನ್ನೂ ಇದೆ.ವೋಯಜರ್‌–1 ಗಗನನೌಕೆ ಅಂತರನಕ್ಷತ್ರೀಯ ವಾತಾವರಣಕ್ಕೆ ಪ್ರವೇಶಿಸಿರುವುದನ್ನು ತಿಳಿದು ಸಂತೋಷವಾಯಿತು ಎಂದು ಮತ್ತೋರ್ವ ವಿಜ್ಞಾನಿ ಡಾನ್‌ ಗನೆರ್ಟ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry