ಬುಧವಾರ, ಜೂನ್ 16, 2021
28 °C

ಅಂತರರಾಜ್ಯ ಡಕಾಯಿತಿ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಅಂತರ ರಾಜ್ಯ ಡಕಾ­ಯಿತಿ­ಯಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಭಾನುವಾರ ಬಂಧಿಸಿ, 700ಗ್ರಾಂ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ.ತಮಿಳು ನಾಡಿನ ಕೃಷ್ಣಗಿರಿ ಜಿಲ್ಲೆಯ ಊತಂಗೆರೆ ತಾಲ್ಲೂಕಿನ ಕೊಂಡಪಟ್ಟಿ ಗ್ರಾಮದ ನಿವಾಸಿಗಳಾದ ಎಂ.ದೇವನ್‌, ಎಂ.ವೆಂಕಟರಾಮ್‌, ಮುತ್ತುರಾಮ್‌, ವೆಂಕಟ­ರಾಮನ್‌, ಕೃಷ್ಣನ್‌ ಬಂಧಿತ ಆರೋಪಿಗಳು.ಕರ್ನಾಟಕದ ಬೇತಮಂಗಲ, ಮುಳ­ಬಾಗಲು,  ಬಳ್ಳಾರಿ, ಹೊಸದುರ್ಗ ಆಂಧ್ರ ಪ್ರದೇಶದ ಪಲಮನೇರು, ವೇಂಪಲ್ಲಿ, ತಮಿಳುನಾಡಿನ ತಿರುನಲ್‌ ಕೋಡಿ, ನಂಬಿಯಾರ್, ಸಕ್ಕಟೈ, ದಿಂಡಿಗಲ್‌, ತಿರುಪತ್ತೂರು ದೇವಕಟ್ಟಿ, ಸೆಮೇನಾರ್‌ ಕೋಯಲ್‌, ಮನಪುರೈ, ತಿರುವಾಯೂರ್‌ ಸೇರಿದಂತೆ 16 ಕಡೆ ನಡೆದ ದರೋಡೆ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಐಜಿಪಿ ಸಯ್ಯದ್‌ ಉಲ್ಪತ್‌ ಹುಸೇನ್‌ ತಿಳಿಸಿದರು.ಹಿನ್ನೆಲೆ: ಕಳೆದ ನವೆಂಬರ್‌ 29ರ ರಾತ್ರಿ ತಾಲ್ಲೂಕಿನ ಬೇತಮಂಗಲ ಗ್ರಾಮದ ಗಂಟ್ಲರೆಡ್ಡಿ ಮನೆ­ಯಲ್ಲಿ ₨ 26 ಲಕ್ಷ ಮೌಲ್ಯದ ಚಿನ್ನಾಭರಣ ದೋಚ­ಲಾಗಿತ್ತು. ಈ ಬಗ್ಗೆ ಬೇತ­ಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ಪತ್ತೆಗಾಗಿ ಬಂಗಾರ­ಪೇಟೆ ಸಿಪಿಐ ಜಿ.ಎನ್‌.ವೆಂಕಟಾಚಲಪತಿ ನೇತೃತ್ವದಲ್ಲಿ ಮೂರು ತಂಡ ರಚಿಸ­ಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಕಾರ್ಯಾ­ಚರಣೆ ಕೈಗೊಂಡ ಪೊಲೀ­ಸರು ಡಕಾಯಿತರನ್ನು ಬಂಧಿಸಿದ್ದಾರೆ. ಇನ್ನೂ ನಾಲ್ಕು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸ­ಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದರು.ಸಿಪಿಐ ವೆಂಕಟಾಚಲಪತಿ ನೇತೃತ್ವದ ತಂಡದಲ್ಲಿ ಮಾರಿಕುಪ್ಪಂ ಠಾಣೆ ಪಿಎಸ್‌ಐ ಸೂರ್ಯಪ್ರಕಾಶ್‌, ಆಂಡ­ರ್ಸನ್‌­ಪೇಟೆ ಠಾಣೆ ಪಿಎಸ್‌ಐ ಎಲ್‌.ಆಂಜಪ್ಪ, ಊರಿಗಾಂ ಠಾಣೆ ಪಿಎಸ್ಐಗಳಾದ ಮಾರ್ಕಂಡಯ್ಯ, ನಾರಾಯಣಸ್ವಾಮಿ, ಸಿಬ್ಬಂದಿ ಲಕ್ಷ್ಮಣರಾವ್‌, ಬಾಲಕೃಷ್ಣ, ಗೋಪಾಲ್‌ ಸಿಂಗ್‌, ಮಹೇಂದ್ರನ್‌, ಚಂದ್ರಶೇಖರ್‌, ಮಂಜುನಾಥ್‌, ಸಂಪಂಗಿ, ಸುನಿಲ್‌ಕುಮಾರ್‌, ಶ್ರೀಧರ್‌, ಮುನಿರಾಜು, ಅನಿಲ್‌­ಕುಮಾರ್‌, ದೇವಪ್ಪ, ಭಾಸ್ಕರ್‌, ಅಣ್ಣಪ್ಪ, ಗಜೇಂದ್ರ, ಚಾಲಕರಾದ ಸೋಮ­ಶೇಖರ್‌ ರೆಡ್ಡಿ, ಸಂಪತ್‌, ಪರಮಶಿವಯ್ಯ ಇದ್ದರು. ಪೊಲೀಸರಿಗೆ ಬಹುಮಾನ ಘೋಷಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.