ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬ್ರೆಟ್ ಲೀ ವಿದಾಯ

ಬುಧವಾರ, ಜೂಲೈ 17, 2019
24 °C

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬ್ರೆಟ್ ಲೀ ವಿದಾಯ

Published:
Updated:

ಸಿಡ್ನಿ (ಪಿಟಿಐ): ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2 ವರ್ಷಗಳ ಹಿಂದೆಯೇ ಟೆಸ್ಟ್‌ಗೆ ವಿದಾಯ ಹೇಳಿದ್ದ ಅವರು ಈಗ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲೂ ಆಡದಿರಲು ನಿರ್ಧರಿಸಿದ್ದಾರೆ.ಈ ಮೂಲಕ ಲೀ ಅವರ 13 ವರ್ಷಗಳ ಕ್ರಿಕೆಟ್ ಜೀವನಕ್ಕೆ ತೆರೆ ಬಿದ್ದಿದೆ. 76 ಟೆಸ್ಟ್ ಪಂದ್ಯಗಳಿಂದ ಅವರು 310 ವಿಕೆಟ್ ಗಳಿಸಿದ್ದಾರೆ. 221 ಏಕದಿನ ಪಂದ್ಯಗಳಿಂದ 380 ವಿಕೆಟ್ ಹಾಗೂ 25 ಟ್ವೆಂಟಿ-20 ಪಂದ್ಯಗಳಿಂದ 28 ವಿಕೆಟ್ ಕಬಳಿಸಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆಡುವುದಾಗಿ 35 ವರ್ಷ ವಯಸ್ಸಿನ ಬ್ರೆಟ್ ಲೀ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry