ಶನಿವಾರ, ಏಪ್ರಿಲ್ 17, 2021
31 °C

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಲಕ್ಷ್ಮಣ್ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಲಕ್ಷ್ಮಣ್ ವಿದಾಯ

ಹೈದರಾಬಾದ್ (ಪಿಟಿ ಐ): ಕೋಲ್ಕೊತ್ತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎಪಿಕ್ 281 ಪಂದ್ಯ ಸೇರಿದಂತೆ ಭಾರತಕ್ಕೆ ಹಲವಾರು ಪಂದ್ಯಗಳಲ್ಲಿ ಜಯ ತಂದು ಕೊಟ್ಟ ಖ್ಯಾತ ಕ್ರೀಡಾಪಟು ವಿ.ವಿ.ಎಸ್.ಲಕ್ಷ್ಮಣ್ ಅವರು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.ಇದರೊಂದಿಗೆ 16 ವರ್ಷಗಳ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಬಿದ್ದಿತು.37ರ ಹರೆಯದ ಲಕ್ಷ್ಮಣ್ ಅವರು ಸಮಕಾಲೀನ  ಕ್ರಿಕೆಟ್ ನ ಅತ್ಯುತ್ತಮ ಬ್ಯಾಟ್ಸ್ ಮೆನ್ ಗಳಲ್ಲಿ ಒಬ್ಬರಾಗಿದ್ದು ~ರಾಷ್ಟ್ರಕ್ಕಾಗಿ ಮಹಾನ್ ಹೆಮ್ಮೆಯೊಂದಿಗೆ ಆಡಿದ ಕ್ರೀಡೆಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನನಗೆ ಅನಿಸಿದೆ~ ಎಂದು ಪತ್ತಿಕಾಗೋಷ್ಠಿಯಲ್ಲಿ ತಿಳಿಸಿದರು.~ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನನ್ನ ನಿವೃತ್ತಿಯನ್ನು ಘೋಷಿಸಲು ನಾನು ಬಯಸಿದ್ದೇನೆ. ಈ ದಿಸೆಯಲ್ಲಿ ಮುಂದುವರಿಯಲು ಇದೀಗ ಸಕಾಲ ಎಂದು ನನ್ನ ಭಾವನೆ~ ಎಂದು ಲಕ್ಷ್ಮಣ್ ಅತ್ಯಂತ ಭಾವುಕರಾಗಿ ಮಾತನಾಡುತ್ತಾ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.