ಗುರುವಾರ , ಅಕ್ಟೋಬರ್ 17, 2019
24 °C

ಅಂತರರಾಷ್ಟ್ರೀಯ ಸಹಕಾರ ವರ್ಷ ಘೋಷಣೆ

Published:
Updated:

ಗದಗ: ಸಹಕಾರಿ ರಂಗಕ್ಕೆ ಪುನಶ್ಚೇತನ ನೀಡುವ ಉದ್ದೇಶದಿಂದ ವಿಶ್ವಸಂಸ್ಥೆ 2012ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಿದೆ ಎಂದು ರಾಷ್ಟ್ರೀಯ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ವಿಶ್ವಸಂಸ್ಥೆ ಪ್ರಸಕ್ತ ವರ್ಷವನ್ನು ಅಂತರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿರುವದು ಸಹಕಾರ ರಂಗದಲ್ಲಿ ಕಾರ್ಯನಿರ್ವಹಿಸುವರಿಗೆ ಸಂತಸ ತಂದಿದೆ. ಇದರ ಮೂಲಕ ಸಹಕಾರಿ ರಂಗದಲ್ಲಿ ಹೊಸ ಚಳವಳಿ ಉಂಟು ಮಾಡಲಿದೆ. ಅಷ್ಟೆ ಅಲ್ಲದೇ, ಸಹಕಾರಿ ಸಂಘಗಳನ್ನು ಸದೃಢಗೊಳಿಸುವುದು ಹಾಗೂ ಸೇವಾ ಭದ್ರತೆ ಒದಗಿಸಲು ಅನಕೂಲಕರವಾಗಲಿದೆ ಎಂದರು.ಕೇಂದ್ರ ಸರ್ಕಾರ ಸಹಕಾರಿ ರಂಗದ ಬಲವರ್ಧನೆಗೆ ಸಂವಿಧಾನದ 111 ತಿದ್ದುಪಡಿ ತರುವ ಮೂಲಕ ಸಹಕಾರಿ ಚಳವಳಿಗೆ ಆನೆ ಬಲ ಬಂದಂತಾಗಿದೆ. ಈ ಮೂಲಕ ಜನರಿಗೆ ತ್ವರಿತಗತಿಯಲ್ಲಿ ಸೇವೆ ನೀಡುವುದರ ಜೊತೆಗೆ ಅದರ ಧ್ಯೇಯೋದ್ದೆಶಗಳನ್ನು ಈಡೇರಿಸಲು ಸಾಧ್ಯವಿದೆ ಎಂದರು.ದೇಶದಲ್ಲಿ 6 ಲಕ್ಷ ಸಹಕಾರಿ ಸಂಸ್ಥೆಗಳಿವೆ. 20 ಕೋಟಿ ಜನರು ಸಂಘಗಳ ಸದಸ್ಯರಿದ್ದಾರೆ. ಇಡೀ ವರ್ಷ ಅಂತರಾಷ್ಟ್ರೀಯ ಸಹಕಾರಿ ವರ್ಷ ಆಚರಿಸುವದರಿಂದ ಸಹಕಾರಿ ರಂಗದಲ್ಲಿ ಮಹತ್ವದ ಬದಲಾವಣೆ ಜೊತೆಗೆ ಹೊಸ ಆಯಾಮ ದೊರೆಯುವ ಲಕ್ಷಣಗಳು ಕಂಡು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಬಲ ನೀಡುವ ಉದ್ದೆೀಶದಿಂದ ಹೈಪವರ್ ಕಮೀಟಿ ಅಧ್ಯಕ್ಷ ಶಿವರಾಜ್‌ರಾವ್ ಪಾಟೀಲ ನೇತೃತ್ವದಲ್ಲಿ ಸಮಿತಿ ರಚಿಸಿ ಅದರ ವರದಿಯ ಅನ್ವಯ ಸಂವಿಧಾನಕ್ಕೆ ತಿದ್ದುಪಡಿ ತಂದು ಸಕಾಲದಲ್ಲಿ ಚುನಾವಣೆ ನಡೆಸುವುದು. ಸೂಪರ್ ಸೀಡ್ ಮಾಡುವಾಗ ಅನುಸರಿಸುವ ನಿಯಮಗಳು ಹಾಗೂ ಸಂಘದ ಸದಸ್ಯರ ಧ್ಯೇಯೋದ್ದೆೀಶ. ಸಂಘದ ಬೆಳವಣಿಗೆ ಕುರಿತು ಅನೇಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುವುದರ ಮೂಲಕ ಕಾಯ್ದೆ ರೂಪಿಸಿರುವದು ಸ್ವಾಗತರ್ಹ. ಕಾಯ್ದೆ ಜಾರಿಗೊಳಿಸುವಲ್ಲಿ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ ಸಿಂಗ್, ಸೋನಿಯಾ ಗಾಂಧಿ, ಕೃಷಿ ಸಚಿವ ಶರದ್ ಪವಾರ ಪಾತ್ರ ಹಿರಿಯದ್ದಾಗಿದೆ ಎಂದು ಹೇಳಿದರು.ಸಹಕಾರ ರಂಗದ ತೊಟ್ಟಿಲು ಎಂದೇ ಖ್ಯಾತಿ ಪಡೆದ ಗದಗ ಜಿಲ್ಲೆ ಅಂತರಾಷ್ಟ್ರೀಯ ಸಹಕಾರಿ ವರ್ಷವನ್ನು ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಸಹಕಾರಿ ತತ್ವಗಳನ್ನು ಜನರಿಗೆ ತಲಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

Post Comments (+)