ಮಂಗಳವಾರ, ಮೇ 18, 2021
30 °C

ಅಂತರ್ಜಲಮಟ್ಟ ಸುಧಾರಣೆಗೆ ಕ್ರಮ:ಬಾಂದಾರಕ್ಕೆ ರೂ 1.42 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ:  ಗ್ರಾಮದಲ್ಲಿನ ಹಳ್ಳಗಳಿಗೆ ಬಾಂದಾರ ಕಟ್ಟುವುದರಿಂದ ಹರಿದು ಹೋಗುವ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದ್ದು ಇದರಿಂದ ರೈತರ ಬಾವಿ, ಬೋರ್‌ವೆಲ್‌ಗಳಿಗೆ ನೀರು ಹೇರಳವಾಗಿ ದೊರಕುವ ಕಾರಣದಿಂದಾಗಿ  ಬಾಂದಾರವನ್ನು ರೈತರು  ತಮ್ಮ ಆಸ್ತಿಯಂತೆ ಕಾಪಾಡ ಬೇಕು ಎಂದು  ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು. ತಾಲ್ಲೂಕಿನ ನಸಲಾಪುರ  ಗ್ರಾಮದ ಹೊನ್ನಮ್ಮಗುಡಿ ಹತ್ತಿರದ ಹಳ್ಳಕ್ಕೆ ರಾಜ್ಯ ಸಭಾ ಸದಸ್ಯ  ಯೋಜನೆಯಡಿಯ ರೂ 1.42 ಕೋಟಿ ಅನುದಾನದಲ್ಲಿ ಮಂಜೂರಾದ ಬಾಂದಾರ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ಭೂಮಿಗೆ ಅನವಶ್ಯಕ ನೀರನ್ನು ಬಿಟ್ಟು ಭೂಮಿಯ ಫಲವತ್ತತೆ ಹಾಳು ಮಾಡಬಾರದು. ರೈತರು ವ್ಯವಸಾಯದಲ್ಲಿ  ಹೆಚ್ಚಿನ ಸೂಕ್ಷ್ಮತೆ ಅಳವಡಿಸಬೇಕು.ಕೃಷ್ಣಾ ನದಿಯಿಂದ ಎಲ್ಲರಿಗೂ ನೀರಿನ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇಂಥಹ ಬಾಂದಾರಗಳಿಂದ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಸುಧಾರಿಸಲಿದೆ ಎಂದರು.ಚಿಕ್ಕೋಡಿ ದೂಧ್‌ಗಂಗಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಭರತ ಬನವನೆ ಮಾತನಾಡಿ, ರಾಜ್ಯಸಭಾ ಸದಸ್ಯರ ಅನುದಾನಲ್ಲಿ ಗ್ರಾಮಕ್ಕೆ ಸುಮಾರು 250 ಮನೆಗಳು, ಶೌಚಾಲಯಗಳು  ಮಂಜೂರಾಗಿವೆ. ಬಾವನಸೌದತ್ತಿ ಹಾಗೂ ನಸಲಾಪುರ ಗ್ರಾಮದ ಕುಡಿಯುವ ನೀರಿನ ಸೌಕರ್ಯಕ್ಕೆ 24 ತಾಸು ವಿದ್ಯುತ್ ಒದಗಿಸುವಂತೆ ಮನವಿ ಮಾಡಿ ಕೊಳ್ಳಲಾಗಿದೆ ಎಂದರು. ರಾಯಬಾಗ ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಪರಿಶಿಷ್ಟ ಜಾತಿ ಪಂಗಡದವರಿಗೆ ನದಿಯಿಂದ ನೀರಿನ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದಲ್ಲಿ ಹೆಚ್ಚಿನ ಅನುದಾನವಿದೆ ಅದರ ಲಾಭ ಪಡೆಯಬೇಕು ಎಂದರು.

 ಜಯಪಾಲ ಬನವಣೆ, ರಾಜಗೌಡಾ ಪಾಟೀಲ, ಬಾಳಾಸಾಬ ಪಾಟೀಲ, ಚವಗೊಂಡಾ ಪಾಟೀಲ, ಬಾಳಾಸಾಬ ಸಮಾಜೆ, ಸುಧಿರ ಮಗದುಮ್, ಅನೀಲ ಪಾಟೀಲ, ಚಿದಾನಂದ ತೋರಸೆ, ಜೆ.ಎನ್.ಶೆಟ್ಟಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.